ಕ್ರೀಡೆ

ಐಪಿಎಲ್ ಹಗರಣದ ಕುರಿತಾಗಿ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ: ಶಶಾಂಕ್ ಮನೋಹರ್

ಹಗರಣಗಳಿಂದ ಐಪಿಎಲ್ ನ್ನು ಶುದ್ಧಗೊಳಿಸಲು ಬಿಸಿಸಿಐ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ...

ಐಪಿಎಲ್ ಹಗರಣದ ಕುರಿತಾಗಿ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ: ಶಶಾಂಕ್ ಮನೋಹರ್
ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್
Published On :

ಕೋಲ್ಕತಾ: ಹಗರಣಗಳಿಂದ ಐಪಿಎಲ್ ನ್ನು ಶುದ್ಧಗೊಳಿಸಲು ಬಿಸಿಸಿಐ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಶನಿವಾರ ಹೇಳಿದ್ದಾರೆ.

ಐಪಿಎಲ್ ಹಗರಣ ಕುರಿತಂತೆ ಇಂದು ಬಿಸಿಸಿಐ ಮುಖ್ಯಸ್ಥ ಜಗನ್ ಮೋಹನ್ ದಾಲ್ಮಿಯಾ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ಅವರು, ಐಪಿಎಲ್ ಹಗರಣ ಕುರಿತಾಗಿ ನಿರ್ಧಾರ ಕೈಗೊಳ್ಳಲು ಬಿಸಿಸಿಐಗೆ ಯಾವುದೇ ದಾರಿಯಿಲ್ಲ ಎಂಬುದು ತಿಳಿದಿದೆ. ಆದರೆ ಬಿಸಿಸಿಐ ಲೋಧ ಸಮಿತಿ ನೀಡಿರುವ ಶಿಫಾರಸ್ಸನ್ನಾಧರು ಅನುಸರಿಸಬೇಕಿತ್ತು. ಬಿಸಿಸಿಐ ತನ್ನ ವರ್ಚಸ್ಸನ್ನು ಕಾಪಾಡಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ.

ಇದೀಗ ಐಪಿಎಲ್ ಹಗರಣ ಸಂಬಂಧ ಬಿಸಿಸಿಐ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಬೋರ್ಡ್ ನ ಕೆಲಸವನ್ನು ನ್ಯಾಯಾಲಯವೇ ಮಾಡಿದೆ. ಸಂಸ್ಥೆಯ ಕುರಿತಂತೆ ಬಿಸಿಸಿಐ ಆಸಕ್ತಿ ತೋರಿಸಬೇಕಿದ್ದು, ಪೂರ್ವಭಾವಿಯಾಗಿ ಚಿಂತನೆ ನಡೆಸಬೇಕಿದೆ. ಜನರಲ್ಲಿ ಮತ್ತೆ ನಂಬಿಕೆ ಹುಟ್ಟಿಸುವಂತಹ ಕೆಲಸವನ್ನು ಬಿಸಿಸಿಐ ಮಾಡಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.