ಸಾನಿಯಾಗೆ ಭರ್ಜರಿ ಸ್ವಾಗತ
ಆಲ್ ಇಂಗ್ಲೆಂಡ್ ಚ್ಯಾಂಪಿಯನ್ ಶಿಪ್ ನಲ್ಲಿ ಭವ್ಯ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ...

ಹೈದರಾಬಾದ್: ಆಲ್ ಇಂಗ್ಲೆಂಡ್ ಚ್ಯಾಂಪಿಯನ್ ಶಿಪ್ ನಲ್ಲಿ ಭವ್ಯ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ತವರಿಗೆ ಆಗಮಿಸಿದ್ದು ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಲಂಡನ್‍ನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಡೋಲು ಡಮರುಗಗಳನ್ನು ಬಾರಿಸುವುದರೊಂದಿಗೆ ಸ್ವಾಗತಿಸಿಕೊಂಡರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಸಾನಿಯಾ ಅವರ ತಾಯಿ ನಸೀಮಾ ಮಿರ್ಜಾ ಭಾವೋದ್ವೇಗಗಳನ್ನು ತಡೆದುಕೊಳ್ಳದೆ ತಮ್ಮ ಪುತ್ರಿಯನ್ನು ಅಪ್ಪಿ ಆನಂದ ಭಾಷ್ಪ ಸುರಿಸಿದರೆ, ಮಗಳ ಕೋಚ್ ಕೂಡ ಆಗಿದ್ದು ವಿಂಬಲ್ಡನ್‍ನಲ್ಲಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ತವರು ಪ್ರೇಮಿಗಳ ಆದರಾತಿಥ್ಯಕ್ಕೆ ಮೂಕವಿಸ್ಮಿತರಾದರು.
``ವಿಂಬಲ್ಡನ್‍ನಲ್ಲಿ ಪ್ರಶಸ್ತಿ ಜಯಿಸಬೇಕೆಂಬ ಕನಸನ್ನು ನಿಜವಾಗಿಸಿ ತವರಿಗೆ ಬಂದಿರುವುದು ನನ್ನಲ್ಲಿ ಹೆಮ್ಮೆಯನ್ನು ಉಂಟುಮಾಡಿದೆ. ವಿಶ್ವದಾದ್ಯಂತ ಇರುವ ಟೆನಿಸ್ ಪ್ರೇಮಿಗಳು ವಿಂಬಲ್ಡನ್‍ನಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ತುಡಿಯುತ್ತಾರೆ. ನನ್ನ ಪಾಲಿಗೆ ಅದು ನನಸಾಗಿದ್ದಕ್ಕೆ ಹೇಳಿಕೊಳ್ಳಲಾಗದ ಆನಂದ ಉಂಟಾಗಿದೆ'' ಎಂದು ಸಾನಿಯಾನುಡಿದರು.
``ಸದ್ಯದಲ್ಲೇ ಯುಎಸ್ ಓಪನ್ ಕೂಡ ಶುರುವಾಗಲಿದೆ. ಆದರೆ ಎರಡು ವಾರಗಳ ಕಾಲ ನಾನು ತವರಿನಲ್ಲಿ ವಿಶ್ರಾಂತಿ ಪಡೆದು ವರ್ಷದ ಕೊನೆಯ ಗ್ರಾಂಡ್‍ಸ್ಲಾಮ್ ಟೂರ್ನಿಗೆ ತೆರಳಲಿದ್ದೇನೆ. ಅಮೆರಿಕನ್ ಓಪನ್‍ನಲ್ಲಿಯೂ ನಾನು ಪ್ರಶಸ್ತಿ ಜಯಿಸುವ ಭರವಸೆಯಿದೆ'' ಎಂದೂ ಸಾನಿಯಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


