ವಿಂಬಲ್ಡನ್ ಬಾಲಕರ ಡಬಲ್ಸ್: ಭಾರತದ ಸುಮಿತ್ ನಗಾಲ್ ಪ್ರಶಸ್ತಿ ಗರಿ
ಬಾಲಕರ ಡಬಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ದಾಖಲೆ ಪುಟ ಸೇರಿದ್ದಾರೆ. ವಿಂಬಲ್ಡನ್‍ನ ಬಾಲಕರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಂ ಟೆನಿಸ್...

Published On :
ಬಾಲಕರ ಡಬಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ಸಾಧನೆ ಮೆರೆದಿದ್ದಾರೆ. ವಿಂಬಲ್ಡನ್‍ನ ಬಾಲಕರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಂ ಟೆನಿಸ್
ಟೂರ್ನಿಯ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ 6ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 17 ವರ್ಷದ ದೆಹಲಿಯ ಸುಮಿತ್ ತಮ್ಮ ಜತೆಗಾರ ವಿಯೆಟ್ನಾಂನ ನಮ್ ಹೊಂಗ್ ಲೀ ಜತೆಗೂಡಿ, ತಮ್ಮ ಪ್ರತಿಸ್ಪರ್ಧಿ ಅಮೆರಿಕದ ರಿಲೀ ಒಪೆಲ್ಕಾ ಮತ್ತು ಜಪಾನ್ ನ ಸ್ಯಾಂಟಿಲಾನ್ ವಿರುದ್ಧ 7-6 (7-4), 6-4 ಸೆಟ್‍ಗಳ ಅಂತರದಲ್ಲಿ ಜಯಿಸಿ ಪ್ರಶಸ್ತಿ ಗೆದ್ದರು. 1 ಗಂಟೆ 3 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಮಿತ್ ಜೋಡಿ ಸಂಪೂರ್ಣ ಪ್ರಬಲ್ಯ ಮೆರೆಯಿತು.
ಆರಂಭಿಕ ಸೆಟ್‍ನಲ್ಲಿ ಎದುರಾಳಿ ಜೋಡಿಯಿಂದ ಪ್ರತಿರೋಧ ಎದುರಿಸಿತಾದರೂ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಇನ್ನು ಎರಡನೇ ಸೆಟ್ ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತ ಈ ಟೂರ್ನಿಯಲ್ಲಿ 3 ಪ್ರಶಸ್ತಿ ಪಡೆಯಿತು.
ಈ ಹಿಂದೆ ಗೆದ್ದವರು: ಕಳೆದ ಬಾರಿ ಭಾರತದ ಪರ ಗ್ರಾಂಡ್ ಸ್ಲಾಂ ಕಿರಿಯರ ವಿಭಾಗದಲ್ಲಿ ಯುಕಿ ಭಾಂಬ್ರಿ ಪ್ರಶಸ್ತಿ ಗೆದ್ದಿದ್ದರು. ಯುಕಿ 2009ರಲ್ಲಿ ಆಸ್ಟ್ರೇಲಿಯಾ ಓಪನ್ ಬಾಲಕರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಉಳಿದಂತೆ ರಾಮನಾಥ್ ಕೃಷ್ಣನ್(ವಿಂಬಲ್ಡನ್, 1954), ರಮೇಶ್ ಕೃಷ್ಣನ್(ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ 1979), ಲಿಯಾಂಡರ್ ಪೇಸ್(ವಿಂಬಲ್ಡನ್ 1990, ಯುಎಸ್ ಓಪನ್ 1991) ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಸಾನಿಯಾ ಮಿರ್ಜಾ 2003ರ ವಿಂಬಲ್ಡನ್‍ನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ರಷ್ಯಾದ ಜತೆಗಾರ್ತಿ ಅಲಿಸಾ ಕ್ಲೆಬೆನೊವಾ ಜತೆಗೂಡಿ ಪ್ರಶಸ್ತಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


