ಕ್ರೀಡೆ

ಫೈನಲ್ ನಲ್ಲಿ ಮುಗುರೂಜಾ, ಸೆರೆನಾ ಫೈಟ್

ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ವೈಭವದ ಪ್ರದರ್ಶನವನ್ನು ಮುಂದುವರೆಸಿರುವ ಸ್ಪೇನ್ ನ ಯುವ ಆಟಗಾರ್ತಿ ಗಾರ್ಬೀನಿ ಮುಗುರೂಜಾ ಫೈನಲ್ ಗೆ ಪ್ರವೇಶ ಪಡೆದರು...

ಫೈನಲ್ ನಲ್ಲಿ ಮುಗುರೂಜಾ, ಸೆರೆನಾ ಫೈಟ್
ಪೋಲೆಂಡ್ ನ ಆಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಗೆದ್ದ ಗಾರ್ಬೀನಿ ಮುಗುರೂಜಾ ಸಂಭ್ರಮ
Published On :

ಲಂಡನ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ವೈಭವದ ಪ್ರದರ್ಶನವನ್ನು ಮುಂದುವರೆಸಿರುವ ಸ್ಪೇನ್ ನ ಯುವ ಆಟಗಾರ್ತಿ ಗಾರ್ಬೀನಿ ಮುಗುರೂಜಾ ಫೈನಲ್ ಗೆ ಪ್ರವೇಶ ಪಡೆದರು.

ಗುರುವಾರ ಇಲ್ಲಿನ ಸೆಂಟರ್ ಕೋರ್ಟ್ ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪೋಲೆಂಡ್ ನ ಆಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ 6-2, 3-6, ಹಾಗೂ 6-3 ಸೆಟ್ ಗಳ ಅಮೋಘ ಗೆಲುವಿನೊಂದಿಗೆ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯೊಂದರಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದರು.

ಡಬಲ್ಸ್ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಭಾರತದ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ನಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಪೋಲೆಂಡ್ ನ ಮಾರ್ಸಿನ್ ಮಟ್ಕೋವ್ ಸ್ಕಿ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿಯ ವಿರುದ್ಧ 6-2, 6-1 ಸೆಟ್ ಗಳ ಗೆಲುವಿನೊಂದಿಗೆ ಉಪಾಂತ್ಯಕ್ಕೆ ಲಗ್ಗೆ ಹಾಕಿತು.

ಸಾನಿಯಾಗೆ ನಿರಾಸೆ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬ್ರೂನೊ ಸೊರೆಸ್ ಜತೆಗೂಡಿ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದ್ದಾರೆ.
2 ಗಂಟೆ 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿ, ತಮ್ಮ ಪ್ರತಿಸ್ಪರ್ಧಿ ಆಸ್ಟ್ರಿಯಾದ ಅಲೆಕ್ಸಾಂಡ್ರಾ ಪೇಯಾ ಮತ್ತು ಹಂಗೇರಿಯಾ ಟಿಮಿಯಾ  ಬಾಬೋಸ್ ಜೋಡಿ ವಿರುದ್ಧ 6-3, 6-7, 7-9 ಸೆಟ್ ಗಳ ಅಂತರದಲ್ಲಿ ಪರಾಭವಗೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.