ಆಶಷ್ ಟೆಸ್ಟ್: ಇಂಗ್ಲೆಂಡ್ ಮೇಲೆತ್ತಿದ ರೂಟ್ ಶತಕ
ಮಧ್ಯಮ ಕ್ರಮಾಂಕದ ಜೋ ರೂಟ್‍ರವರ ಉಪಯುಕ್ತ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ,...

ಕಾರ್ಡಿಫ್: ಮಧ್ಯಮ ಕ್ರಮಾಂಕದ ಜೋ ರೂಟ್‍ರವರ ಉಪಯುಕ್ತ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ, ಆಸ್ಟ್ರೇಲಿಯಾ ವಿರುದ್ಧ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನಾಂತ್ಯಕ್ಕೆ 7 ವಿಕೆ-ಟ್‍ಗೆ 343 ರನ್- ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಕೇವಲ 7 ರನ್ ಮೊತ್ತಕ್ಕೆ ಆರಂಭಿಕರಾದ ಲಿತ್, ಕುಕ್ ಹಾಗೂ 4ನೇ ಕ್ರಮಾಂಕದ ಇಯಾನ್ ಬೆಲ್ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ, ಬ್ಯಾಲೆನ್ಸ್ ಹಾಗೂ ಜೋ ರೂಟ್, ನೇ ವಿಕೆಟ್‍ಗೆ 153 ರನ್ ಗಳ ಜೊತೆಯಾಟ ಡಿ, ನಿಂಗ್ ಸಗೆ ಶಕ್ತಿ ತುಂಬಿದರು.
ನಂತರ, ಸ್ಟಾಕ್ಸ್ ರೂಟ್ ಜೋಡಿ 5ನೇ ಕೆಟ್‍ಗೆ 84 ರನ್ ಜೊತೆಯಾಟ ನೀಡಿ ಆಸರೆಯಾಯಿತು. ತಂಡದ ಮೊತ್ತ 280 ರನ್ ಆಗಿದ್ದಾಗ, ರೂಟ್ (134 ರನ್, 166 ಎಸೆತ, 17 ಬೌಂಡರಿ) ಅವರ ಭರ್ಜರಿ ಇನಿಂಗ್ಸ್ ಕೊನೆಗೊಂಡಿತು. ಅವರ ಹಿಂದೆಯೇ ಸ್ಟಾಕ್ಸ್ ಸಹ ಹೊರನಡೆದರು. ಆದರೂ, ನಂತರದ ಬ್ಯಾಟ್ಸ್ ಮನ್ ಗಳು ತಂಡದಮೊತ್ತವನ್ನು 343ಕ್ಕೆ ತಂದು ನಿಲ್ಲಿಸಿದರು. ದಿನಾಂತ್ಯಕ್ಕೆ ಅಜೇಯರಾಗುಳಿದಿರುವ ಮೊಯೀನ್ ಅಲಿ ಹಾಗೂ ಸ್ಟುವರ್ಟ್ಬ್ರಾಡ್ ಗುರುವಾರ ಇನಿಂಗ್ಸ್ ಮುಂದುವರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


