ಕ್ರೀಡೆ

ಜನವರಿಯಲ್ಲಿ ಟೀಂ ಇಂಡಿಯಾ ಆಸೀಸ್‌ ಪ್ರವಾಸ

2016ರ ಜನವರಿಯಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ-ಟೀಂ ಇಂಡಿಯಾ ನಡುವೆ 5 ಏಕದಿನ ಹಾಗೂ 3 ಟಿ-20 ಪಂದ್ಯಗಳು ನಡೆಯಲಿವೆ...

ಜನವರಿಯಲ್ಲಿ ಟೀಂ ಇಂಡಿಯಾ ಆಸೀಸ್‌ ಪ್ರವಾಸ
ಟೀಂ ಇಂಡಿಯಾ
Published On :

ಮೆಲ್ಬರ್ನ್‌: 2016ರ ಜನವರಿಯಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ-ಟೀಂ ಇಂಡಿಯಾ ನಡುವೆ 5 ಏಕದಿನ ಹಾಗೂ 3 ಟಿ-20 ಪಂದ್ಯಗಳು ನಡೆಯಲಿವೆ.

ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸತತ ಎರಡು ವರ್ಷಗಳಲ್ಲಿ ಎರಡು ಸರಣಿ ಆಡಿದ ದಾಖಲೆಗೆ ಭಾಜನವಾಗಲಿದೆ. ಕಳೆದ ವರ್ಷ ಭಾರತ, ಆಸ್ಟ್ರೇಲಿಯಾ ಜತೆಗೆ ಇಂಗ್ಲೆಂಡ್‌ ಕೂಡ ತ್ರಿಕೋಣ ಸರಣಿಯಲ್ಲಿ ಭಾಗವಹಿಸಿತ್ತು.

ಐದು ಏಕದಿನ ಪಂದ್ಯಗಳಲ್ಲಿ ಮೊದಲನೇ ಪಂದ್ಯ ಪರ್ತ್‌ನಲ್ಲಿ ಜನವರಿ 12ರಂದು ನಡೆಯಲಿದೆ. ಉಳಿದ ಪಂದ್ಯಗಳು ಬ್ರಿಸ್ಬೆನ್‌, ಮೆಲ್ಬರ್ನ್, ಕ್ಯಾನ್ಬೆರಾ ಮತ್ತು ಸಿಡ್ನಿಯಲ್ಲಿ ನಡೆಯಲಿದೆ. ಮೂರು ಟಿ-20 ಪಂದ್ಯಗಳು ಅಡಿಲೇಡ್, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ.


ಏಕದಿನ ಪಂದ್ಯಗಳಾ ವೇಳಾಪಟ್ಟಿ:

1ನೇ ಏಕದಿನ: ಜನವರಿ 12, ಪರ್ತ್‌

2ನೇ ಏಕದಿನ: ಜನವರಿ 15, ಬ್ರಿಸ್ಬೇನ್‌

3ನೇ ಏಕದಿನ: ಜನವರಿ 17, ಮೆಲ್ಬರ್ನ್‌

4ನೇ ಏಕದಿನ: ಜನವರಿ 20, ಕ್ಯಾನ್ಬೆರಾ

5ನೇ ಏಕದಿನ: ಜನವರಿ 23, ಸಿಡ್ನಿ

ಟಿ-20 ಪಂದ್ಯಗಳು

1ನೇ ಟಿ- 20: ಜನವರಿ 26, ಅಡಿಲೇಡ್

2ನೇ ಟಿ-20: ಜನವರಿ 29, ಮೆಲ್ಬರ್ನ್‌

3ನೇ ಟಿ- 20: ಜನವರಿ 31, ಸಿಡ್ನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.