ಧೋನಿಗೆ 34ನೇ ವಸಂತ
ಭಾರತ ಏಕದಿನ ಹಾಗೂ ಟಿ-20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳವಾರ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.,,,

ನವದೆಹಲಿ: ಭಾರತ ಏಕದಿನ ಹಾಗೂ ಟಿ-20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳವಾರ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಜುಲೈ 7, 1981ರಲ್ಲಿ ಜಾರ್ಖಂಡ್‍ನ ರಾಂಚಿಯಲ್ಲಿ ಜನಿಸಿದ ಧೋನಿಗೆ ಅಪ್ಪನಾದ ಬಳಿಕ ಬರುತ್ತಿರುವ ಮೊಟ್ಟಮೊದಲ ಹುಟ್ಟುಹಬ್ಬವಿದು ಎಂಬುದು ವಿಶೇಷ ಎಂದು ದಿ ಟೈ ಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಶಾಲಾ ದಿನಗಳಲ್ಲಿ ಗೋಲ್‍ಕೀಪರ್ ಆಗಿದ್ದ ಧೋನಿ
ಕ್ರಮೇಣ ವಿಕೆಟ್‍ಕೀಪಿಂಗ್‍ನತ್ತ ಲಕ್ಷ್ಯ ಹರಿಸಿದರು. ಬಿಹಾರ ಪರ ತನ್ನ 18ರ ಹರೆಯದಲ್ಲಿ 1999-2000ನೇ ಸಾಲಿಗೆ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ ಧೋನಿ, 2004ರ ಡಿಸೆಂಬರ್ 23ರಂದು ಚಿತ್ತಗಾಂಗ್‍ನಲ್ಲಿ ಬಾಂಗ್ಲಾದೇಶ ವಿರುದ್ಧ ಪ್ರಥಮ ಏಕದಿನ ಪಂದ್ಯವನ್ನಾಡಿದರು. ಆದರೆ ಮೊದಲ ಎಸೆತದಲ್ಲೇ ರನೌಟ್ ಆದ ಧೋನಿ ನಿರಾಸೆ ಅನುಭವಿಸಿದ್ದರು.
ಇನ್ನು 2005ರ ಡಿಸೆಂಬರ್‍ನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಬದುಕಿಗೆ ಕಾಲಿರಿಸಿದ ಧೋನಿ ಎರಡು ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಭಾರತ ತಂಡದ ನಾಯಕನ ಸ್ಥಾನವನ್ನು ಅಲಂಕರಿಸಿದರು. ನಾಯಕತ್ವ ಹೊತ್ತುಕೊಂಡ ಬೆನ್ನಲ್ಲ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಮೊಟ್ಟಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ವಿಜಯದತ್ತ ತಂಡವನ್ನು ಮುನ್ನಡೆಸಿದ ಧೋನಿ ಆನಂತರ ಮುಟ್ಟಿದ್ದೆಲ್ಲಾ ಚಿನ್ನವಾಯಿತು.
2007-08ರ ಸಿಬಿ ಸರಣಿ, 2007ರ ಐಸಿಸಿ ವಿಶ್ವ ಟಿ-20 ಚಾಂಪಿಯನ್‍ಶಿಪ್, 2013ರ ಐಸಿಸಿ ವಿಶ್ವ ಏಕದಿನ ಕ್ರಿಕೆಟ್ ಚಾಂಪಿಯನ್‍ಶಿಪ್ ಹಾಗೂ ಇದೇ ಸಾಲಿನ ಐಸಿಸಿ ಚಾಂಪಿಯನ್ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟರು. ಮಾತ್ರವಲ್ಲದೆ, 2009ರ ಡಿಸೆಂಬರ್‍ನಿಂದ ಸತತ 18 ತಿಂಗಳುಗಳ ಕಾಲ ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂ.1 ಸ್ಥಾನದಲ್ಲಿ ಮುನ್ನಡೆಯುವಂತೆಯೂ ಶ್ರಮಿಸಿದ್ದರು. ಕಳೆದ ವರ್ಷಾಂತ್ಯದಲ್ಲಿ ಟೆಸ್ಟ್ ನಾಯಕತ್ವದಿಂದ ದೂರ ಸರಿದ ಧೋನಿ, ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಭಾರತ ತಂಡದ ನಾಯಕನಾಗಿ ಮುಂದುವರೆದಿದ್ದಾರೆ. ಭಾರತ ಕಂಡ ಶ್ರೇಷ್ಠ ನಾಯಕ ಧೋನಿಗೆ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅಜಿಂಕ್ಯ ರಹಾನೆ ಸೇರಿದಂತೆ ಇನ್ನೂ ಅನೇಕ ಪ್ರಮುಖರು ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


