ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟ ಪೇಸ್-ಹಿಂಗಿಸ್ ಜೋಡಿ
ಆಕರ್ಷಕ ಪ್ರದರ್ಶನ ನೀಡಿದ ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ...

ವಿಂಬಲ್ಡನ್: ಆಕರ್ಷಕ ಪ್ರದರ್ಶನ ನೀಡಿದ ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆದಿದ್ದಾರೆ.
ವಿಂಬಲ್ಡನ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿಯು ಮಾರ್ಟಿನಾ ಹಿಂಗಿಸ್ ಅವರ ಜತೆಗೂಡಿ ಆಡಿದ ಆಟದಲ್ಲಿ ಹಿಂಗಿಸ್ ಕೇವಲ 48 ನಿಮಿಷಗಳಲ್ಲಿ ಗೆಲವು ಪಡೆದರು.
ಇದರಂತೆ ಇಂದು ನಡೆದ ಹೋರಾಟದಲ್ಲಿ ಇಂಡೋ-ಸ್ವಿಸ್ ಜೋಡಿ 6-2, 6-2ರ ನೇರ ಸೆಟ್ ಗಳಲ್ಲಿ ಅರ್ಟೆಮ್ ಸಿತಾಕ್ ಮತ್ತು ಅನಸ್ತೇಸಿಯಾ ರೊಡಿನೋವಾ ಅವರನ್ನು ಸೋಲಿಸಿದರು.
ವಿವಿಧ ಗ್ರ್ಯಾನ್ ಸ್ಲ್ಯಾಮ್ ಗಳನ್ನು ಗೆದ್ದಿರುವ ಈ ಜೋಡಿ, ಈ ಪಂದ್ಯದಲ್ಲಿ ಒಂದು ಬ್ರೇಕ್ ಪಾಯಿಂಟ್ ಎದುರಿಸಲಿಲ್ಲ. ಎದುರಾಳಿ ತಂಡವನ್ನು ಪ್ರತಿ ಸೆಟ್ ನಲ್ಲಿಯೂ ಎರಡು ಬಾರಿ ಎದುರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


