ಬಂಗಾಳ ಪರ ಆಡಲಿರುವ ಓಜಾ
ಮುಂದಿನ ಸಾಲಿನಲ್ಲಿ ಬಂಗಾಳ ಪರ ಆಡುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ ಆಹ್ವಾನವನ್ನು...

Published On :
ಕೋಲ್ಕತಾ: ಮುಂದಿನ ಸಾಲಿನಲ್ಲಿ ಬಂಗಾಳ ಪರ ಆಡುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ ಆಹ್ವಾನವನ್ನು ತಾನು ನಿರಾಕರಿಸಲಾಗಲಿಲ್ಲ
ಎಂದು ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ತಿಳಿಸಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
'ಸೌರವ್ ನನ್ನ ಜತೆಗೆ ಮಾತನಾಡಿ ಬಂಗಾಳ ಪರ ಆಡುವಂತೆ ಕೇಳಿಕೊಂಡಾಗ ನಾನು ಉದ್ವೇಗಗೊಂಡೆ. ಅವರ ಈ ಆಹ್ವಾನವನ್ನು ತಿರಸ್ಕರಿಸುವ ಹಾಗೆಯೇ ಇರಲಿಲ್ಲ. ಮುಖ್ಯವಾಗಿ ಒಂದು ಎಲೈಟ್ ತಂಡದ ಪರ ಆಡುವುದು ನನ್ನ ಹಿಂಬರುವಿಕೆಗೆ ನೆರವಾಗುತ್ತದೆ. ಈ ದಿಸೆಯಲ್ಲಿ ಹೈದರಾಬಾದ್‍ನಿಂದ ಎನ್‍ಒಸಿಯನ್ನೂ ಪಡೆದಿದ್ದೇನೆ' ಎಂದು ಭಾರತದ ಪರ 24 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನು ಆಡಿರುವ ಓಜಾ ಹೇಳಿದ್ದಾರೆ.
ಓಜಾ ಮೂಲತಃ ಒಡಿಶಾದವರಾಗಿದ್ದರೂ, 2001ರಿಂದಲೂ ಹೈದರಾಬಾದ್ ಅನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆಗಸ್ಟ್ 1ರಿಂದ ಚೆನ್ನೈನಲ್ಲಿ ಶುರುವಾಗಲಿರುವ ಭಾರತ 'ಎ' ತಂಡದಲ್ಲಿ ಸ್ಥಾನ ಗಳಿಸಿರುವ ಓಜಾ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


