102ನೇ ಶ್ರೇಯಾಂಕಿತನ ಮುಂದೆ ಮಂಡಿಯೂರಿದ ರಾಫೆಲ್ ನಡಾಲ್
ಎರಡು ಬಾರಿಯ ಚಾಂಪಿಯನ್ ಸ್ಪೇನ್ ರಫೆಲ್ ನಡಾಲ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ...

ಲಂಡನ್: ಎರಡು ಬಾರಿಯ ಚಾಂಪಿಯನ್ ಸ್ಪೇನ್ ರಫೆಲ್ ನಡಾಲ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಸತತ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ 14 ಗ್ರ್ಯಾನ್ ಸ್ಲಾಮ್‌ಗಳ ಚಾಂಪಿಯನ್ ನಡಾಲ್, ಜರ್ಮನಿಯ ಡಸ್ಟಿನ್ ಬ್ರೌನ್ ಅವರ ವಿರುದ್ಧ ಸೋತು ಮೂರನೇ ಸುತ್ತಿಗೇರಲು ವಿಫಲರಾಗಿದ್ದಾರೆ.
ಎರಡನೇ ಸುತ್ತಿನ ಹಣಾಹಣಿಯಲ್ಲಿ 4 ಸೆಟ್‌ಗಳಿಗೆ ವಿಸ್ತರಿಸಿದರೂ ನಡಾಲ್ ಪ್ರದರ್ಶನ ನಿರಾಶಾದಾಯಕವಾಗಿತ್ತು. ಈ ವರ್ಷ ಪದೇ ಪದೆ ಗಾಯಗಳ ಸಮಸ್ಯೆಯಿಂದ ಹೊರಗುಳಿಯುತ್ತಿದ್ದ ನಡಾಲ್‌ಗೆ ಈ ಟೂರ್ನಿಯಲ್ಲಿ 10ನೇ ಶ್ರೇಯಾಂಕ ನೀಡಲಾಗಿತ್ತು. ಆದರೆ ಅವರು ವಿಶ್ವದಲ್ಲಿ 102ನೇ ಶ್ರೇಯಾಂಕ ಹೊಂದಿರುವ ಡಸ್ಟಿನ್ ಬ್ರೌನ್ ಅವರ ಮುಂದೆ 7-5, 3-6, 6-4, 6-4 ಅಂತರದಿಂದ ಸೋತಿದ್ದು ಕೌತುಕಕ್ಕೆ ಕಾರಣವಾಗಿದೆ.
ಬ್ರೌನ್ ಅವರು ನಡಾಲ್ ಅವರನ್ನು ಮಣಿಸಿದ್ದು ಎರಡನೇ ಸಲ. ಕಳೆದ ವರ್ಷ ನಡಾಲ್
ಅವರನ್ನು ಸೋಲಿಸಿದ್ದರು. ಬ್ರೌನ್ ಆರಂಭಿಕ ಪಂದ್ಯದಲ್ಲಿ ಚೀನಾ ತೈಪೆಯ ಯೆನ್ ಸುನ್ ಲು ವಿರುದ್ಧ (3-6, 6-3, 7-5, 6-4) ಗೆದ್ದು ಎರಡನೇ ಸುತ್ತಿಗೆ ತಲುಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


