ರಾಂಚಿಯ ಸೋಲು ತಪ್ಪಿಸಿದ ಜಾಕ್ಸನ್
ನಾಯಕ ಆಶ್ಲೇ ಜಾಕ್ಸನ್ ಗಳಿಸಿದ ಗೋಲ್ ನ ನೆರವಿನಿಂದಾಗಿ, ಆತಿಥೇಯ ರಾಂಚಿ ತಂಡ...

ರಾಂಚಿ: ನಾಯಕ ಆಶ್ಲೇ ಜಾಕ್ಸನ್ ಗಳಿಸಿದ ಗೋಲ್ ನ ನೆರವಿನಿಂದಾಗಿ, ಆತಿಥೇಯ ರಾಂಚಿ ತಂಡ, ದಬಾಂಗ್ ಮುಂಬೈ ವಿರುದ್ಧ ಎಚ್‍ಐಎಲ್ ಪಂದ್ಯದಲ್ಲಿ 2-2 ಗೋಲುಗಳ ಡ್ರಾ ಸಾಧಿಸಿ, ಸೋಲು ತಪ್ಪಿಸಿಕೊಂಡಿತು.
ಪಂದ್ಯದ 12ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮುಂಬೈ ತಂಡ, ಆತಿಥೇಯರಿಗೆ 1-0 ಗೋಲುಗಳ ಅಂತರದ ಸವಾಲೊಡ್ಡಿತು. ಈ ಗೋಲು ಗಳಿಸಿದ್ದು ಗ್ಲೆನ್ ಟರ್ನರ್. ಇದಾದ ಮೇಲೆ, ಎದುರಾಳಿ ತಂಡದ ಸಂತಾ ಸಿಂಗ್ ಅವರು 15ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಆತಿಥೇಯರಿಗೆ ಸವಾಲೊಡ್ಡಿದರು. ಮುಂಬೈ ತಂಡ ಗಳಿಸಿದ 2-0 ಗೋಲುಗಳ ಮುನ್ನಡೆಯನ್ನು ಬೆನ್ನಟ್ಟಿದ ರಾಂಚಿ ತಂಡಕ್ಕೆ ಚೊಚ್ಚಲ ಮಂದಹಾಸ ತಂದುಕೊಟ್ಟಿದ್ದು ಡೇನಿಯಲ್ ಬೇಲ್. 16ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲ್‍ನಿಂದಾಗಿ ರಾಂಚಿ ತಂಡ, ಮುಂಬೈ ತಂಡದೊಂದಿಗೆ ಹೊಂದಿದ್ದ ಗೋಲುಗಳ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿತು.
ಏತನ್ಮಧ್ಯೆ, ಪಂದ್ಯದ ಮೊದಲಾರ್ಧ ಮುಗಿಯುವ ಮುನ್ನ ಗೋಲು ದಾಖಲಿಸುವ ಅವಕಾಶಗಳನ್ನು ರಾಂಚಿ ಕೈಚೆಲ್ಲಿತು. ಇನ್ನು, ಪಂದ್ಯ ಅಂತಿಮ ಹಂತಕ್ಕೆ ಸಾಗುತ್ತಿದ್ದರೂ ರಾಂಚಿ ತಂಡದಿಂದ ಯಾವುದೇ ಗೋಲು ದಾಖಲಾಗದಿರುವುದು ತವರಿನ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, 38ನೇ ನಿಮಿಷದಲ್ಲಿ ರಾಂಚಿ ತಂಡದ ನಾಯಕ ಆಶ್ಲೆ ಜಾಕ್ಸನ್ ತಂಡಕ್ಕೆ ನೆರವಾದರು.
38ನೇ ನಿಮಿಷದಲ್ಲಿ ಅವರು ಗಳಿಸಿಕೊಟ್ಟ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಮ್ಯಾಥ್ಯೂ ಸ್ವಾನ್ ಕೈಬಿಟ್ಟ ಮುಂಬೈ ಸ್ನಾಯು ಸೆಳೆತದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ಸ್ವಾನ್ ಅವರನ್ನು ದಬಾಂಗ್ ಮುಂಬೈ ತಂಡ ಕೈಬಿಟ್ಟಿದೆ. ಈ ಬಾರಿಯ ಎಚ್‍ಐಎಲ್ ಪಂದ್ಯಾವಳಿಗಾಗಿ ಅವರನ್ನು ಮುಂಬೈ ತಂಡ ಖರೀದಿಸಿತ್ತು. ಆದರೆ, ಪಂದ್ಯಾವಳಿಗೆ ಆರಂಭಕ್ಕೂ ಮುನ್ನ ಅವರು ಮೀನುಖಂಡದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಪಂದ್ಯಾವಳಿ ಹಿನ್ನೆಲೆಯಲ್ಲಿ, ಅವರು ಭಾರತಕ್ಕೆ ಬಂದು ತಂಡವನ್ನು ಸೇರಿಕೊಂಡರಾದರೂ ಅವರ ನೋವು ಉಪಶಮನವಾಗಿರಲಿಲ್ಲ. ಹಾಗಾಗಿ, ಅವರು ಎಚ್‍ಐಎಲ್‍ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ. ನೋವು ಹೆಚ್ಚಾದ ಕಾರಣ, ಅವರು ಚಿಕಿತ್ಸೆಗಾಗಿ ಬುಧವಾರ ಸ್ವದೇಶಕ್ಕೆ ಮರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


