ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ನ್ಯೂಜಿಲೆಂಡ್: ರಾಹುಲ್ ದ್ರಾವಿಡ್
ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ಬಾರಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಕ್ರಿಕೆಟ್ ಗೆಲ್ಲುವ...

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ಬಾರಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಫೆವರೆಟ್ ತಂಡಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರೆಂಡಾನ್ ಮೆಕಲಮ್ ಅವರ ನಾಯಕತ್ವ ನ್ಯೂಜಿಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲು ಸಮರ್ಥವಾಗಿದೆ ಎಂದು ದ್ರಾವಿಡ್ ವಿಶ್ಲೇಷಿಸಿದ್ದಾರೆ.
ಈ ಬಾರಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ವಿಶ್ವಕಪ್ ಆತಿಥೇಯ ವಹಿಸುತ್ತಿದ್ದರು ನ್ಯೂಜಿಲೆಂಡ್'ಗೆ ಯಾವುದೇ ಒತ್ತಡವಿಲ್ಲ. ಸಣ್ಣ ರಾಷ್ಟ್ರವಾದ್ದರಿಂದ ಅಲ್ಲಿನ ಜನರು ತಮ್ಮ ತಂಡ ವಿಶ್ವಕಪ್ ಗೆಲ್ಲಲೇಬೇಕೆಂದು ಬಯಸುತ್ತಿಲ್ಲ. ತಮ್ಮ ತಂಡ ಉತ್ತಮ ಹೋರಾಟ ತೋರಬೇಕೆಂಬುದೇ ನ್ಯೂಜಿಲೆಂಡ್ ಜನರ ಆಶಯ ಎಂದರು.
ಅಲ್ಲದೆ ಮೆಕಲಮ್ ರೂಪದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಒಳ್ಳೆಯ ನಾಯಕತ್ವ ಸಿಕ್ಕಿದೆ. ಟಿಮ್ ಸೌಥೀ ನೇತೃತ್ವದ ಬೌಲಿಂಗ್ ಬಳಗ ನಿಜಕ್ಕೂ ಮಾರಕವಾಗಿದೆ. ಸೌಥೀಯವರಂತೂ ಒತ್ತಡದ ಸನ್ನಿವೇಶದಲ್ಲೂ ಯಾರ್ಕರ್ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್ ವಿಷಯದಲ್ಲಿ ಬ್ರೆಂಡಾನ್ ಮೆಕಲಮ್, ಕೇನ್ ವಿಲಿಯಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್'ನಿಂದ ನ್ಯೂಜಿಲೆಂಡ್ ಒಂದು ಬಲಿಷ್ಠ ಪಡೆಯಾಗಿ ಹೊರಹೊಮ್ಮಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನ್ಯೂಜಿಲೆಂಡ್ ತಂಡ ಇದೂವರೆಗೂ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಟಿ20 ಮಾದರಿ ಕ್ರಿಕೆಟ್'ನ ವಿಶ್ವಕಪ್ ಕೂಡ ಕಿವೀಸ್'ಗೆ ಒಲಿದಿಲ್ಲ. ಚೊಚ್ಚಲ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಹಾತೊರೆಯುತ್ತಿರುವ ನ್ಯೂಜಿಲೆಂಡ್ ತಂಡ ಈ ಬಾರಿ ತನ್ನ ತವರಿನಲ್ಲಾದರೂ ಯಶಸ್ಸು ಕಾಣುತ್ತಾ ಎಂದು ಕಾದುನೋಡಬೇಕು. ಫೆಬ್ರವರಿ 14ರಿಂದ ಮಹಾಟೂರ್ನಿ ಆರಂಭವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


