ವಾವ್ರಿಂಕಾ, ಜೊಕೊ ಕ್ವಾರ್ಟರ್ ಫೈನಲ್ ಘಟಕ್ಕೆ
ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ವಿಶ್ವದ ನಂಬರ್ಒನ್ ಆಟಗಾರ ಜೊಕೊವಿಚ್ ಅವರು...

ಮೆಲ್ಬರ್ನ್: ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ವಿಶ್ವದ ನಂಬರ್ಒನ್ ಆಟಗಾರ ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್ನ ಕ್ವಾರ್ಟರ್ ಫೈನಲ್ ಘಟ್ಟ ಪ್ರವೇಶಿಸಿದ್ದಾರೆ.
ಮಾರ್ಗರೇಟ್ ಕೋರ್ಟ್ ಅರೇನಾದಲ್ಲಿ ನಡೆದ ಸ್ವಿರ್ಡರ್ಲೆಂಡ್ನ ವಾವ್ರಿಂಕಾ ಹಾಗೂ ಸ್ಪೇನ್ನ ಗಿಲೆರ್ಮೊ ಗಾರ್ಸಿಯಾ ಲೊಪೇಜ್ ನಡುವಿನ ಸುಮಾರು 3 ಗಂಟೆ 2 ನಿಮಿಷಗಳವರೆಗೆ ನಡೆಯಿತು. ಇದರಲ್ಲಿ ವಾವ್ರಿಂಕಾ, ಗಿಲೆರ್ಮೋ ರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದರು. ಆದರೂ, ವಾವ್ರಿಂಕಾ ಅವರು 7-6 (7-2), 6-4, 4-6, 7-6
(10-8) ಸೆಟ್ಗಳಲ್ಲಿ ಮಣಿಸಿ, ಕ್ವಾರ್ಟರ್ ಫೈನಲ್ಗೆ ಕಾಲಿಟ್ಟರು.
ಇನ್ನು, ಸರ್ಬಿಯಾದ ಜೊಕೊವಿಚ್ ಅವರು, ಲಕ್ಸೆಂಬರ್ಗ್ನ ಗಿಲ್ಸ್ ಮುಲ್ಲರ್ ವಿರುದಟಛಿ 6-4, 7-5, 7-5 ಅಂತರದಲ್ಲಿ ಜಯ ಸಾಧಿಸಿದರು. ಮೊದಲ ಸೆಟ್ನ ಆರಂಭದಿಂದಲೂ ಎದುರಾಳಿ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜೊಕೊವಿಚ್, ಪಂದ್ಯದ ಅಂತ್ಯದವರೆಗೂ ಪಟ್ಟು ಬಿಡದೇ ಆಡಿದರು. ಅಲ್ಲಲ್ಲಿ, ಮುಲ್ಲರ್ ಅವರು ತೀವ್ರ ಪ್ರತಿರೋಧ ತೋರಿದರೂ, ಛಲಬಿಡದ ಜೊಕೊವಿಚ್ ಪಂದ್ಯದಲ್ಲಿ ಜಯಶಾಲಿಯಾದರು.
ಇತಿಹಾಸ ಬರೆದ ಮೈಲೋಸ್
ಭಾನುವಾರ ನಡೆದ 4ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ, ಕೆನಡಾದ ಮೈಲೋಸ್ ರಾವೊನಿಕ್, ಸ್ಪೇನ್ನ ಫೆಲಿಸಿಯಾನೊ ಲೋಪೇಜ್ ವಿರುದ್ಧ 6-4, 4-6, 6-3, 7-6 (9-7), 6-3 ಸೆಟ್ಗಳಲ್ಲಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು. ಈ ಮೂಲಕ, ಕೆನಡಾದ ಟೆನಿಸ್ ಆಟಗಾರರೊಬ್ಬರು ಕಳೆದ 47 ವರ್ಷಗಳಿಂದೀಚೆಗೆ ಆಸ್ಟ್ರೇಲಿಯನ್ ಓಪನ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಪಡೆದರು. 1968ರಲ್ಲಿ ಕೆನಡಾದ ಮೈಕಲ್ ಬೆಲ್ಕಿನ್ ಎಂಬುವರು ಮೆಲ್ಬರ್ನ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದರು.
ಫೆರರ್ಗೆ ನಿರಾಸೆ
ಫಾರ್ಮ್ ನಲ್ಲಿರುವ ಜಪಾನ್ನ ಕಿಯ್ ನಿಶಿಕೋರಿ ಅವರು ವಿರುದ್ಧ ಸೆಣೆಸಿದ್ದ ಸ್ಪೇನ್ನ ಡೇವಿಡ್ ಫೆರರ್, 3-6, 3-6, 3-6 ಅಂತರದಲ್ಲಿ ಸೋತು ಹೊರನಡೆದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


