1992ರಲ್ಲಿ ಪರಾಕ್ರಮ ಮೆರೆದ ಪಾಕಿಸ್ತಾನ
ಈ ಆವೃತ್ತಿ ವಿಶ್ವಕಪ್ ಟೂರ್ನಿಗೆ ಹೊಸ ಆಯಾಮ ನೀಡಿತ್ತು. ಸಾಕಷ್ಟು ಬದಲಾವಣೆಗಳಿಂದ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ...

ಈ ಆವೃತ್ತಿ ವಿಶ್ವಕಪ್ ಟೂರ್ನಿಗೆ ಹೊಸ ಆಯಾಮ ನೀಡಿತ್ತು. ಸಾಕಷ್ಟು ಬದಲಾವಣೆಗಳಿಂದ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಈ ವಿಶ್ವಕಪ್ ಯಶಸ್ವಿಯಾಗಿತ್ತು. ಮೊದಲ ಬಾರಿಗೆ ಪ್ರತಿ ತಂಡಗಳು ಸಾಂಪ್ರದಾಯಿಕ ಬಿಳಿ ಉಡುಗೆ ಹೊರತಾಗಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಪಂದ್ಯದಲ್ಲಿ ಕೆಂಪು ಚೆಂಡಿನ ಬಳಕೆ ಬದಲು ಬಿಳಿ ಚೆಂಡನ್ನು ಪರಿಚಯಿಸಲಾಯಿತು. ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಜತೆಗೆ ನ್ಯೂಜಿಲೆಂಡ್ ಈ ವಿಶ್ವಕಪ್‍ನ ಆತಿಥ್ಯ ವಹಿಸುವ
ಅವಕಾಶ ಪಡೆದಿತ್ತು. ಅಲ್ಲದೆ ಟೂರ್ನಿಯಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಹೊನಲು ಬೆಳಕಿನ ಪಂದ್ಯಗಳನ್ನು ಆಡಿಸಲಾಗಿತ್ತು. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪರಿಚಯಿಸಲಾಯಿತು. ಈ ಗೌರವಕ್ಕೆ ನ್ಯೂಜಿಲೆಂಡ್‍ನ ಮಾರ್ಟೀನ್ ಕ್ರೊವ್ ಭಾಜನರಾದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 22 ರನ್‍ಗಳ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ರೌಂಡ್ ರಾಬಿನ್ ಮಾದರಿ ಬದಲಾಗಿ ಎರಡು ಅರ್ಹತಾ ಸುತ್ತಿನ ಗುಂಪುಗಳನ್ನು ನಿಗದಿಪಡಿಸಲಾಯಿತು. ಹಾಗಾಗಿ ಈ ಟೂರ್ನಿಯಲ್ಲಿ ಒಟ್ಟು 39 ಪಂದ್ಯಗಳು ನಡೆದವು. ಆರಂಭದಲ್ಲಿ 8 ತಂಡಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಒಟ್ಟು 28 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, 1991ರಲ್ಲಿ ಜನಾಂಗೀಯ ಭೇದದಿಂದಾಗಿ ಅಮಾನತಿ ನಲ್ಲಿದ್ದ ದಕ್ಷಿಣ ಆಫ್ರಿಕಾ ಮತ್ತೆ ಐಸಿಸಿ ವ್ಯಾಪ್ತಿಗೆ ಸೇರಿಕೊಂಡಿತು. ಹಾಗಾಗಿ 9 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


