ಬೋಪಣ್ಣಗೆ ಸಿಹಿ ಭೂಪತಿಗೆ ಕಹಿ
ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ

ನವದೆಹಲಿ: ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ತಮ್ಮ ಜೊತೆಗಾರ ಕೆನಡಾದ ಡೇನಿಯಲ್ ನೆಸ್ಟರ್ ಜೊತೆಗೂಡಿ, ಎದುರಾಳಿಗಳಾದ ಸಿಪ್ರಸ್‍ನ ಮಾರ್ಕೋಸ್ ಬಾಗ್ದಾದೀಸ್ ಹಾಗೂ ಆಸ್ಟ್ರೇಲಿಯಾದ ಮಾರಿಂಕೊ ಮ್ಯಾಟೊಸೆವಿಕ್ ವಿರುದ್ಧ 7-6 (7-2), 7-5 ಅಂತರದಲ್ಲಿ ಜಯ ಸಾಧಿಸಿದರು.
ಆದರೆ, ಭಾರತದ ಮಹೇಶ್ ಭೂಪತಿ- ಆಸ್ಟ್ರಿಯಾದ ಜುರ್ಗನ್ ಮೆಲ್ಜರ್ ಜೋಡಿ, ಅರ್ಜೆಂಟೈನಾದ ಜೋಡಿಯಾದ ಡಿಗೊ ಶೆವಟ್ರ್ ಸಮನ್ - ಹೊರಾಸಿಯೊ ಜೆಬಲ್ಲೋಸ್ ಜೋಡಿ ವಿರುದ್ಧ 4-6, 3-6 ಅಂತರದಲ್ಲಿ ಪರಾಭವ ಹೊಂದಿತು.
ಸೆರೆನಾ, ಜೊಕೊವಿಚ್‍ಗೆ ಜಯ: ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ತಮ್ಮ ಎದುರಾಳಿ ರಷ್ಯಾದ ಕುಜ್ನೆಸ್ಟೋವ್ ವಿರುದ್ಧ 6-0, 6-1, 6-4 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ವಿಲಿಯಂಸ್ ತಮ್ಮ ಎದುರಾಳಿ ರಷ್ಯಾದ ಜ್ವೊನರೆವಾ ವಿರುದ್ಧ 7-5, 6-0 ಸೆಟ್‍ಗಳಅಂತರದಲ್ಲಿ ಜಯ ಸಾಧಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


