ಫೆಡರರ್, ಶರಪೋವಾಗೆ ಪ್ರಯಾಸದ ಜಯ
ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ರಷ್ಯಾದ ಮಾರಿಯಾ ಶರಪೋವಾ ಕ್ರಮವಾಗಿ ಪುರುಷರ...

ಮೆಲ್ಬರ್ನ್: ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ರಷ್ಯಾದ ಮಾರಿಯಾ ಶರಪೋವಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನ ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಇವರಿಬ್ಬರಿಗೂ ಈ ಜಯ ಅಷ್ಟು ಸುಲಭವಾಗಿ ದಕ್ಕಲಿಲ್ಲ.
ಫೆಡರರ್‌ಗೆ ಅವರ ವಿರುದ್ಧ ಸೆಣೆಸಿದ ಇಟಲಿಯ ಸೈಮನ್ ಬೊಲೋಲಿ ಅವರು ತೀವ್ರ ಪೈಪೋಟಿ ನೀಡಿದರೆ, ಇನ್ನು ಶರಪೋವಾಗೆ ಅವರ ದೇಶದವರೇ ಆದ ಅಲೆಕ್ಸಾಂಡ್ರಾ ಪನೋವಾ ತೀವ್ರ ಪ್ರತಿಸ್ಪರ್ಧೆ ನೀಡಿದರು. ಈ ಅಡೆತಡೆಗಳನ್ನು ದಾಟಿದ ಜೊಕೊ, ಶರಪೋವಾ ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು.
ಫೆಡರರ್‌ಗೆ ಪೈಪೋಟಿ ನೀಡಿದ ಸೈಮನ್, ಪಂದ್ಯದ ಮೊದಲ ಸೆಟ್‌ನಲ್ಲೇ ಪರಾಕ್ರಮ ತೋರಿಸಿದರು. 6-3 ಅಂತರದಿಂದ ಮೊದಲ ಸೆಟ್ ಗೆಲ್ಲುವ ಮೂಲಕ, ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಫೆಡರರ್‌ಗೆ ಚುರುಕು ಮುಟ್ಟಿಸಿದರು. ಆದರೆ ಇನ್ನುಳಿದ ಸೆಟ್‌ಗಳಲ್ಲಿ 6-3, 6-2, 6-2 ಅಂತರದಲ್ಲಿ ಜಯ ಗಳಿಸಿದ ಅವರು, ಮುಂದಿನ ಸುತ್ತಿಗೆ ಪಾದಾರ್ಪಣೆ ಮಾಡಿದರು.
ಇನ್ನು, 2ನೇ ಶ್ರೇಯಾಂಕಿತೆ ಮಾರಿಯಾ ಶರಪೋವಾ ಸಹ ತಮ್ಮ ಎದುರಾಳಿ ಅಲೆಕ್ಸಾಂಡ್ರಾ ಅವರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಮೊದಲ ಸೆಟ್‌ನಲ್ಲಿ ರಷ್ಯಾದ ಆಟಗಾರ್ತಿ 6-1ರ ಅಂತರದಲ್ಲಿ ಜಯ ಸಾಧಿಸಿದರಾದರೂ, 2ನೇ ಸೆಟ್‌ನಲ್ಲಿ ಜಯ 6-4 ಅಂತರದಲ್ಲಿ ಅಲೆಕ್ಸಾಂಡ್ರಾ ಪಾಲಾಯಿತು. ಅನಂತರ 3ನೇ ಸೆಟ್‌ನಲ್ಲಿ ಪುಟಿದೆದ್ದ ಶರಪೋವಾ, 7-5ರಿಂದ ಗೆಲ್ಲುವ ಮೂಲಕ ಪಂದ್ಯದಲ್ಲಿ ಜಯ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


