ಆಸ್ಟ್ರೇಲಿಯನ್ ಓಪನ್: ಪೇಸ್, ಸಾನಿಯಾ ಶುಭಾರಂಭ
ಭಾರತದ ಹಿರಿಯ ಟೆನಿಸ್ ಕ್ರೀಡಾಳುಗಳಾದ ಲಿಯಾಂಡರ್ ಪೇಸ್ ಹಾಗೂ ಸಾನಿಯಾ ಮಿರ್ಜಾ, ಕ್ರಮವಾಗಿ..

ಮೆಲ್ಬರ್ನ್: ಭಾರತದ ಹಿರಿಯ ಟೆನಿಸ್ ಕ್ರೀಡಾಳುಗಳಾದ ಲಿಯಾಂಡರ್ ಪೇಸ್ ಹಾಗೂ ಸಾನಿಯಾ ಮಿರ್ಜಾ, ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಲಿಯಾಂಡರ್ ಹಾಗೂ ದಕ್ಷಿಣ ಆಫ್ರಿಕಾದ ರಾವೆನ್ ಕ್ಲಾಸೆನ್ ಜೋಡಿ, ಅಮೆರಿಕದ ಜೋಡಿಯಾದ ಸ್ಕಾಟ್ ಲಿಪ್ಸ್ ಕಿ ಹಾಗೂ ರಾಜೀವ್ ರಾಮ್ ಜೋಡಿಯನ್ನು 6-4, 7-6 (8-6) ಅಂತರದಲ್ಲಿ ಮಣಿಸಿತು. ಅತ್ತ, ಸಾನಿಯಾ ಮಿರ್ಜಾ ಹಾಗೂ ತೈಪೇನ ಸು-ವೆಯ್ ಹ್ಸೆ ಜೋಡಿ, ಅರ್ಜೆಂಟೈನಾ-ಸ್ವಿಡ್ಜರ್ಲೆಂಡ್ ಜೋಡಿಯಾದ ಮಾರಿಯಾ ಇರಿಗೋಯೆನ್ ಹಾಗೂ ರೋಮಿಯಾ ಒಪರಾಂಡಿಯನ್ನು 6-2, 6-0 ಅಂತರದಲ್ಲಿ ಸೋಲಿಸಿತು.
ಪಂದ್ಯಾವಳಿಯಲ್ಲಿ 10ನೇ ಶ್ರೇಯಾಂಕ ಪಡೆದಿರುವ ಪೇಸ್ ಹಾಗೂ ಕ್ಲಾಸೆನ್ ಪಂದ್ಯಾವಳಿಯಲ್ಲಿ 10ನೇ ಶ್ರೇಯಾಂಕ ಪಡೆದಿರುವ ಪೇಸ್ ಹಾಗೂ ಕ್ಲಾಸೆನ್ ಜೋಡಿ, ಎದುರಾಳಿಗಳನ್ನು ಸೋಲಿಸಲು 91 ನಿಮಿಷಗಳನ್ನು ತೆಗೆದುಕೊಂಡಿತು. ಈ ಪಂದ್ಯಕ್ಕೂ ಮೊದಲು ನಡೆದ ಮಹಿಳೆಯ ಡಬಲ್ಸ್ ಪಂದ್ಯದಲ್ಲಿ ಸಾನಿಯಾ-ಸುವೆಯ್ ಜೋಡಿ, ಉತ್ತಮ ಆಟ ಪ್ರದರ್ಶಿಸಿತು.
ವಿಶ್ವದ 5ನೇ ಶ್ರೇಯಾಂಕ ಪಡೆದಿರುವ ಸಾನಿಯಾ-ಸು ವೆಯ್, ಪಂದ್ಯದುದ್ದಕ್ಕೂ ಎದುರಾಳಿಗಳಾದ ಇರಿಗೋಯೆನ್-ರೋಮಿನಾ ಜೋಡಿ ವಿರುದ್ಧ ಆಕ್ರಮಣಕಾರಿ ಆಟವನ್ನು ನೀಡಿತು. ಸಾನಿಯಾ ಜೋಡಿಯ ಪ್ರಚಂಡ ಆಟದೆದುರು ಮಂಕಾದ ಎದುರಾಳಿಗಳು ಪಂದ್ಯದಲ್ಲಿ 21 ತಪ್ಪುಗಳನ್ನೆಸಗಿದರು. ಇರಿಗೋಯೆನ್-ರೋಮಿನಾ ಜೋಡಿಯ ದುರ್ಬಲ ಆಟದ ಲಾಭ ಪಡೆದ ಸಾನಿಯಾ-ಸು ವೆಯ್, ಕೇವಲ 48 ನಿಮಿಷಗಳಲ್ಲಿ ಪಂದ್ಯದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿತು.
2ನೇ ಸುತ್ತಿನ ಪಂದ್ಯದಲ್ಲಿ ಭಾರತ-ತೈಪೇ ಜೋಡಿ, ಕೆನಡಾ-ಪೋರ್ಚುಗಲ್ ಜೋಡಿಯಾದ ಗ್ಯಾಬ್ರಿಯೆಲಾ ಡಾಬ್ರೋವ್‌ಸ್ಕಿ ಹಾಗೂ ಅಲಿಸ್ಟಾ ರೊಸೊಲ್ಕಾ ವಿರುದ್ಧ ಸೆಣೆಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


