ನಡಾಲ್ ತಿಣುಕಾಟ
ವಿಶ್ವದ 3ನೇ ಶ್ರೇಯಾಂಕದ ಸ್ಪೇನ್‌ನ ರಾಫೆಲ್ ನಡಾಲ್ ಬುಧವಾರ ದ್ವಿತಿಯ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ..

ಮೆಲ್ಬರ್ನ್: ವಿಶ್ವದ 3ನೇ ಶ್ರೇಯಾಂಕದ ಸ್ಪೇನ್‌ನ ರಾಫೆಲ್ ನಡಾಲ್ ಬುಧವಾರ ದ್ವಿತಿಯ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ, 3ನೇ ಸುತ್ತಿಗೆ ಕಾಲಿಟ್ಟರು. ಆದರೆ ಅವರಿಗೆ ಆ ಜಯ ಸುವಭವಾಗಿರಲಿಲ್ಲ. ಅಮೆರಿಕದ ಆಟಗಾರ ಟಿಮ್ ಸ್ಮಿಜೆಕ್, ನಡಾಲ್‌ಗೆ ತೀವ್ರ ಪೈಪೋಟಿ ನೀಡಿದರು. ಆದರೂ ತೀವ್ರ ಹೋರಾಟ ನಡೆಸಿದ ನಡಾಲ್ 6-2, 3-6, 6-7, (2-7), 6-3, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಅಂಡಿ ಮರ್ರೆಗೆ ಜಯ
ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಂಡಿ ಮರ್ರೆ, ಆಸ್ಟ್ರೇಲಿಯಾದ ಮಾರಿಂಕೋ ಮ್ಯಾಟೋಸೆವಿಕ್ ವಿರುದ್ಧ 6-1, 6-3, 6-2 ಸೆಟ್‌ಗಳಲ್ಲಿ ಜಯ ಸಾಧಿಸಿದರು.
ಬ್ರಯಾನ್ ಸಹೋದರರಿಗೆ ಜಯ
ಅಮೆರಿಕದ ಬಾಬ್ ಬ್ರಾಯನ್ ಹಾಗೂ ಮೈಕ್ ಬ್ರಯಾನ್ ಜೋಡಿ, ಪುರುಷರ ಡಬಲ್ಸ್ ವಿಭಾಗದ ಮೂರನೇ ಸುತ್ತನ್ನು ಪ್ರವೇಶಿಸಿದೆ. ಬುಧವಾರದ ಪಂದ್ಯದಲ್ಲಿ ಈ ಜೋಡಿ, ಆಸ್ಟ್ರೇಲಿಯಾದ ಜಾನ್ ಮಿಲ್‌ಮನ್ ಹಾಗೂ ಬೆಂಜಮಿನ್ ಮಿಚೆಲ್ ಜೋಡಿಯನ್ನು 6-3, 7-5 ಸೆಟ್‌ಗಳಲ್ಲಿ ಪರಾಭವಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


