ಕ್ರೀಡೆ

ಸ್ಟಾರ್ ಆಟಗಾರರ ಮುನ್ನಡೆ

ಸ್ಟಾರ್ ಆಟಗಾರರ ಮುನ್ನಡೆ
ನೊವಾಕ್ ಜೊಕೊವಿಚ್, ಸೆರೆನಾ ವಿಲಿಯಮ್ಸ್
Published On :

ಮೆಲ್ಬರ್ನ್: ಖ್ಯಾತ ಟೆನಿಸ್ ತಾರೆಯರಾದ ನೊವಾಕ್ ಜೊಕೊವಿಚ್, ಸೆರೆನಾ ವಿಲಿಯಮ್ಸ್, ವಿಕ್ಟೋರಿಯಾ ಅಜರೆಂಕಾ, ವೀಸನ್ ವಿಲಿಯಮ್ಸ್, ಅಗ್ನಿಸ್ಕಾ ರಾಡ್ವಾಂಸ್ಯಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದ ಈ ದಿಗ್ಗಜರು ಮುಂದಿನ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಪಂದ್ಯಾವಳಿಯ ಮೊದಲ ದಿನವಾದ ಸೋಮವಾರ ಕೆಲವೊಂದು ಅನಿರೀಕ್ಷಿತ ಫಲಿಂತಾಶಗಳಿಗೆ ಸಾಕ್ಷಿಯಾಗಿತ್ತು. ಉತ್ತಮ ಶ್ರೇಯಂಕ ಪಡೆದ ಆಟಗಾರರು ಮೊದಲ ಸುತ್ತಿನ ಪಂದ್ಯದಲ್ಲೇ ಮುಗ್ಗರಿಸಿದರೆ, ಸ್ಥಳೀಯ ಆಟಗಾರರು ಮಿಂಚಿದ್ದರು.

ಆದರೆ, ಮಂಗಳವಾರ ಇದೇ ಮಾದರಿಯ ಫಲಿತಾಂಶಗಳು ಪುನರಾವರ್ತನೆಯಾಗಲಿಲ್ಲ. ಸ್ಟಾರ್ ಆಟಗಾರರು ಅಕ್ಷರಶಃ ದರ್ಬಾರು ನಡೆಸಿದರು.

ಪುರುಷರ ವಿಭಾಗದಲ್ಲಿ ಗಮನ ಸೆಳೆದಿದ್ದು ವಿಶ್ವದ ನಂಬರ್‌ಒನ್ ಆಟಗಾರ ನೊವಾಕ್ ಜೊಕೊವಿಚ್. ಮತ್ತೊಮ್ಮೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಐದು ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರವಾಗುವ ಆಸೆಯಿಂದ ಕಣಕ್ಕಿಳಿದಿರುವ ಸರ್ಬಿಯಾದ ಈ ಆಟಗಾರ ನಿರೀಕ್ಷೆಯಿಂದ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದುರ.

ಮಂಗಳವಾರ ಪಂದ್ಯದಲ್ಲಿ ಸ್ಲೊವೇನಿಯಾದ ಅಲ್ಜಾಜ್ ಬೆಡೆನ್ ವಿರುದ್ಧ ಸೆಣೆಸಿದ ಅವರು, 6-3, 6-2, 6-4 ಅಂತರದಲ್ಲಿ ಜಯ ಗಳಿಸಿ, ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿದರು. ಮತ್ತೊಂದು ಪಂದ್ಯದಲ್ಲಿ, ಜಪಾನ್‌ನ ಕಿಯ್ ನಿಶಿಕೋರಿ ಅವರು ಸ್ಪೇನ್‌ನ ನಿಕೋಲಸ್ ಅಲ್ ಮಾಗ್ರೊ ವಿರುದ್ಧ 6-4, 7-6(7-1), 6-2 ಸೆಟ್‌ಗಳಲ್ಲಿ ಮಣಿಸಿ ಜಯ ಸಾಧಿಸಿದರು.

ಐದು ಬಾರಿ ಆಸ್ಟ್ರೇಲಿಯನ್ ಓಪನ್ ಕಪ್ ಮುಡಿಗೇರಿಸಿಕೊಂಡಿರುವ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸಹ ಮಂಗಳವಾರ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದರು. ಇಲ್ಲಿನ ಮಾರ್ಗರೇಟ್ ಕೋರ್ಟ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಅವರು, ಬೆಲ್ಜಿಯಂನ ಅಲೈಸನ್ ವ್ಯಾನ್ ಇತ್ವಾಂಕ್ ವಿರುದ್ಧ 6-0, 6-4 ನೇರ ಸೆಟಗಳ ಜಯ ಸಾಧಿಸಿ 2ನೇ ಸುತ್ತಿಗೆ ಪದಾರ್ಪಣೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.