ಆಸೀಸ್ ತಂಡಕ್ಕೆ ಭಾರತ ಮೂಲದ ಸಂಧು
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಆಟಗಾರನೊಬ್ಬನಿಗೆ ಸ್ಥಾನ ದೊರೆತಿದೆ.

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಆಟಗಾರನೊಬ್ಬನಿಗೆ ಸ್ಥಾನ ದೊರೆತಿದೆ.
ವೇಗದ ಬೌಲರ್ ಗುರಿಂದರ್ ಸಂಧು, ಮುಂಬರುವ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಜನಿಸಿದ್ದ ಸಂಧು, ಆಸ್ಟ್ರೇಲಿಯಾದಲ್ಲಿಯೇ ನೆಲೆಸಿದ್ದು, ಅಲ್ಲಿನ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎಡಗೈ ವೇಗಿ ಮಿಚೆಲ್ ಜಾನ್ಸನ್, ಸ್ನಾಯು ಸೆಳೆತದಿಂದ ಬಳಲುತ್ತಿರುವ ಕಾರಣ ಅವರ ಸ್ಥಾನದಲ್ಲಿ ಸಂಧು ದಾಳಿಗೆ ಇಳಿಯುವ ಸಾಧ್ಯತೆಯಿದೆ.
ತ್ರಿಕೋನ ಸರಣಿಯ ಆರಂಭದ ಪಂದ್ಯಗಳಿಂದ ಹೊರಗುಳಿದಿರುವ ಜಾನ್ಸನ್, ಒಮ್ಮೆಲೆ ವಿಶ್ವಕಪ್ ಪಂದ್ಯಗಳಿಗೆ ಆಸ್ಚ್ರೇಲಿಯಾ ತಂಡ ಕೂಡಿಕೊಳ್ಳಬಹುದು. ಹಾಗಾಗಿ, ಮುಂಜಾಗ್ರತೆ ದೃಷ್ಟಿಯಿಂದ ಸಂಧುಗೆ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ.
ಇಂಗ್ಲೆಂಡ್, ಭಾರತ ತಂಡಗಳನ್ನೂ ಒಳಗೊಂಡ ತ್ರಿಕೋನ ಸರಣಿ ಜ.16ರಿಂದ ಆರಂಭವಾಗಲಿದೆ. ಅಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು ಅತಿಥೇಯ ಆಸ್ಟ್ರೇಲಿಯಾ ಎದುರು ಸೆಣಸಲಿದ್ದಾರೆ. ಸುಮಾರು 135-140ರ ವೇಗದಲ್ಲಿ ಚೆಂಡು ಎಸೆಯುವ 21ರ ಗುರಿಂದರ್ ಸಂಧುಗೆ ಮುಖ್ಯವಾಗಿ ಈ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸವಾಲಾಗಿದ್ದು, ಅವರೆದುರು ಉತ್ತಮ ದಾಳಿ ನಡೆಸುವ ವಿಶ್ವಾಸದಲ್ಲಿದ್ದಾರೆ.
ಇವರ ತಂದೆ ಟ್ಯಾಕ್ಸಿ ಚಾಲಕರಾಗಿದ್ದು 32 ವರ್ಷಗಳ ಹಿಂದೆಯೇ ಸಿಡ್ನಿಗೆ ಸ್ಥಳಾಂತರಗೊಂಡಿದ್ದು, ಅಲ್ಲಿಯೇ ಕಠಿಣ ತರಬೇತಿ ನಡೆಸಿದ್ದ ಸಂಧು, 19 ವರ್ಷದೊಳಗಿನವರ ಆಸ್ಟ್ರೇಲಿಯಾ ತಂಡದ ಮೂಲಕ ಪದಾರ್ಪಣೆ ಮಾಡಿದ್ದರು. ಸಂಧು 29 ಎ ಪಂದ್ಯಗಳನ್ನಾಡಿದ್ದು, 24.36 ಸರಾಸರಿಯಲ್ಲಿ 52 ವಿಕೆಟ್ ಉರುಳಿಸಿದ್ದಾರೆ. 2012-13 ಋತುವಿನಲ್ಲಿ ಅವರು ಪ್ರತಿಷ್ಟಿತ ಸ್ಟೀವ್ ವಾ ಪದಕಕ್ಕೂ ಭಾಜನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


