ಕ್ರೀಡೆ

ಹಾಪ್ ಮೆನ್ ಕಪ್ ಫೈನಲ್: ಸೆರೆನಾ ಮಣಿಸಿದ ರಾಧ್ವಾನ್‌ಸ್ಕ

ಪರ್ತ್ ನಲ್ಲಿ ಶನಿವಾರ ನಡೆದ ಹಾಪ್ ಮೆನ್ ಕಪ್ ಟೆನಿಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂಬರ್ ಒನ್ ಆಟಗಾರ್ತಿ...

ಹಾಪ್ ಮೆನ್ ಕಪ್ ಫೈನಲ್: ಸೆರೆನಾ ಮಣಿಸಿದ ರಾಧ್ವಾನ್‌ಸ್ಕ
ಅಗ್ನಿಯೇಸ್ಕಾ ರಾಧ್ವಾನ್‌ಸ್ಕ
Published On :

ಪರ್ತ್: ಪರ್ತ್ ನಲ್ಲಿ ಶನಿವಾರ ನಡೆದ ಹಾಪ್ ಮೆನ್ ಕಪ್ ಟೆನಿಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್  ಅವರನ್ನು ಪರಾಭವಗೊಳಿಸಿ ಅಗ್ನಿಯೇಸ್ಕಾ ರಾಧ್ವಾನ್‌ಸ್ಕ ಕಿರೀಟ ಗೆದ್ದಿದ್ದಾರೆ.

ಪ್ರಸ್ತುತ ಪಂದ್ಯದಲ್ಲಿ ಪೋಲ್ಯಾಂಡ್ ಮೂಲದ ರಾಧ್ವಾನ್‌ಸ್ಕ 6-4 6-7 (3) 6-1 ಅಂತರದಿಂದ ಸೆರಿನಾ ಅವರನ್ನು ಸೋಲಿಸಿದ್ದಾರೆ.

ಮಾರ್ಟಿನಾ ನವ್ರತಿಲೋವಾ ಅವರ ಬಳಿ ಕೋಚಿಂಗ್ ಪಡೆದಿರುವ ರಾಧ್ವಾನ್‌ಸ್ಕ ಏಳು ಬಾರಿ ಸೆರಿನಾ ಅವರನ್ನು ಎದುರಿಸಿ ಇದೀಗ ಮೊದಲ ಬಾರಿಗೆ ಜಯ ಸಾಧಿಸಿದ್ದಾರೆ.

ಪಂದ್ಯ ಗೆದ್ದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಧ್ವಾನ್‌ಸ್ಕ, ನಾನು ಅವರ (ಸೆರೆನಾ) ವಿರುದ್ಧ ಆಟವಾಡುವಾಗ ನಾನೇನನ್ನೂ ಕಳೆದುಕೊಳ್ಳುವುದಿಲ್ಲ. ಆಕೆ ನಂಬರ್ ಒನ್ ಮತ್ತು ಗ್ರೇಟ್ ಚಾಂಪಿಯನ್. ಸ್ಕೋರ್ ಏನೆಂಬುದು ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಇಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ಆಕೆ ದೊಡ್ಡ ಫೈಟರ್, ನಾನಿಲ್ಲಿ ಉತ್ತಮವಾಗಿ ಆಡಿದೆ ಎಂಬುದರ ಬಗ್ಗೆ ನನಗೆ ಖುಷಿಯಿದೆ. ಆದಾಗ್ಯೂ, ಇಂಥಾ ಗೆಲವುಗಳೇ ನಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.