ಶತಕ ಬಾರಿಸಿ ನಿರಾಳನಾದ ರಾಹುಲ್
ಗುರುವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದೆ...

ಸಿಡ್ನಿ: ಗುರುವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದೆ ಎಂದು ಹೆಮ್ಮೆ ಪಡುವುದಕ್ಕಿಂತ ಹೆಚ್ಚು ನಾನು ನಿರಾಳನಾಗಿದ್ದೇನೆ ಎಂದು ಕುಡ್ಲದ ಕುವರ ಲೋಕೇಶ್ ರಾಹುಲ್ ಹೇಳಿದ್ದಾರೆ.
ಕರ್ನಾಟಕದ 22ರ ಹರೆಯದ ರಾಹುಲ್ ಸಿಡ್ನಿಯಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾರೆ. 342 ಬಾಲ್ಗಳನ್ನೆದುರಿಸಿ 110 ರನ್ ದಾಖಲಿಸುವ ಮೂಲಕ ರಾಹುಲ್ ಸಿಡ್ನಿಯಲ್ಲಿ ಮಿಂಚಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗೆ 141 ರನ್ಗಳ ಜತೆಯಾಟ ಆಡಿದ ರಾಹುಲ್, ಮೆಲ್ಬರ್ನ್ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿ 1 ರನ್ ಗೆ ಔಟಾಗಿದ್ದರು. ಮೆಲ್ಬರ್ನ್ನಲ್ಲಿ ತನ್ನ ಪ್ರಥಮ ಪಂದ್ಯದಲ್ಲೇ ನಿರಾಶಾದಾಯಕ ಪ್ರದರ್ಶನ ನೀಡಿರುವ ಬಗ್ಗೆ ನನಗೆ ತುಂಬಾ ಬೇಸರವಾಗಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ, ಧೈರ್ಯಗೆಡಬೇಡ ಎಂದು ನನ್ನನ್ನು ಹುರಿದುಂಬಿಸಿದರು. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಡು ಎಂದು ಕೊಹ್ಲಿ ನನಗೆ ಧೈರ್ಯ ತುಂಬಿದರು. ಈಗ ನಾನು ಶತಕ ಬಾರಿಸಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ್ದೇನೆ ಎಂಬ ಹೆಮ್ಮೆಗಿಂತ ನಾನೀಗ ಚಿಂತೆ ಮುಕ್ತನಾಗಿದ್ದೇನೆ ಎಂದು ಪಂದ್ಯದ ನಂತರ ಮಾತನಾಡಿದ ರಾಹುಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


