ಬೌಲರ್‌ಗಳ ನಿಂದನೆ ಬೇಡ: ಶಮಿ
ಭಾರತೀಯ ಬೌಲರ್‌ಗಳನ್ನು ದಯವಿಟ್ಟು ನಿಂದಿಸಬೇಡಿ..ಇದು ಟೀಂ ಇಂಡಿಯಾ ವೇಗಿ ಮಹಮದ್ ಶಮಿ ಅವರ ಮನವಿ.

ಸಿಡ್ನಿ: ಭಾರತೀಯ ಬೌಲರ್‌ಗಳನ್ನು ದಯವಿಟ್ಟು ನಿಂದಿಸಬೇಡಿ..ಇದು ಟೀಂ ಇಂಡಿಯಾ ವೇಗಿ ಮಹಮದ್ ಶಮಿ ಅವರ ಮನವಿ.
ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ 572ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರ ಬಗ್ಗೆ ಮಾತನಾಡಿರುವ ಶಮಿ, ಇದರಲ್ಲಿ ಬೌಲರ್‌ಗಳ ತಪ್ಪೇನಿಲ್ಲ ಎಂದಿದ್ದಾರೆ. ಸಿಡ್ನಿ ಕ್ರೀಡಾಂಗಣದ ಪಿಚ್ ನಿರ್ಜೀವವಾಗಿದೆ. ಸಮತಟ್ಟಾಗಿರುವ ಪಿಚ್ ಮೇಲೆ ಬೌಲರ್‌ಗಳಿಗೆ ಉತ್ತಮವಾಗಿ ಬೌಲ್ ಮಾಡಲು ಸಾಧ್ಯವಾಗುತ್ತಿಲ್ಲ. ಆಸೀಸ್ ಆಟಗಾರರಿಗೆ ಈ ಪಿಚ್‌ಗಳ ಗುಣದ ಸಂಪೂರ್ಣ ಅರಿವಿದೆ. ಹಾಗಾಗಿ ಉತ್ತಮ ಲೈನ್ ಅಂಡ್ ಲೆನ್ತ್‌ನಲ್ಲಿ ಬೌಡ್ ಮಾಡಬಲ್ಲರು. ನಾವು ಅವರನ್ನು ಅನುಕರಿಸುತ್ತಿದ್ದೇವಾದರೂ ಅದು ನಮಗೆ ಸಹಾಯಕವಾಗುತ್ತಿಲ್ಲ ಎಂದಿದ್ದಾರೆ ಅವರು.
ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪೂರ್ವ ಯೋಜಿತ ಗೇಮ್‌ಪ್ಲ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಶಮಿ ಮೈದಾನಕ್ಕಿಳಿದ ಮೇಲೆ ಆಯಾ ಸಂದರ್ಭಕ್ಕನುಗುಣವಾಗಿ ರಣತಂತ್ರ ರೂಪಿಸುವಂಥ ಒತ್ತಡದಲ್ಲಿ ಬೌಲರ್‌ಗಳು ಸಿಲುಕಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


