ಕ್ರೀಡೆ

ಕೇನ್-ವ್ಯಾಟ್ಲಿಂಗ್ ವಿಶ್ವ ದಾಖಲೆ

ಕೇನ್ ವಿಲಿಯಮ್ಸನ್ ಅವರ ದ್ವಿಶತಕ ಹಾಗೂ ಬಿಜೆ ವಾಟ್ಲಿಂಗ್ ಅವರೊಂದಿಗೆ...

ಕೇನ್-ವ್ಯಾಟ್ಲಿಂಗ್ ವಿಶ್ವ ದಾಖಲೆ
ಕೇನ್ ವಿಲಿಯಮ್ಸನ್, ಬಿಜೆ ವಾಟ್ಲಿಂಗ್
Published On :

ವೆಲ್ಲಿಂಗ್ಟನ್(ನ್ಯೂಜಿಲೆಂಡ್): ಕೇನ್ ವಿಲಿಯಮ್ಸನ್ ಅವರ ದ್ವಿಶತಕ ಹಾಗೂ ಬಿಜೆ ವಾಟ್ಲಿಂಗ್ ಅವರೊಂದಿಗೆ 6ನೇ ವಿಕೆಟ್ ನೀಡಿದ ಮುರಿಯದ 365 ರನ್‌ಗಳ ವಿಶ್ವದಾಖಲೆಯ ಜೊತೆಯಾಟದಿಂದಾಗಿ, ಆತಿಥೇಯ ನ್ಯೂಜಿಲೆಂಡ್ ತಂಡ, ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ.

ಕಳೆದ ವರ್ಷ ಫೆ,.14ರಂದು, ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಂ ಹಾಗೂ ವಾಟ್ಲಿಂಗ್ ಜೋಡಿ 6ನೇ ವಿಕೆಟ್‌ಗೆ 352 ರನ್ ಪೇರಿಸಿತ್ತು. ಈ ದಾಖಲೆಯನ್ನು ಈಗ ಇದೇ ತಂಡದ ವಿಲಿಯಮ್ಸನ್-ವಾಟ್ಲಿಂಗ್ ಜೋಡಿ ಮುರಿದಿದೆ.

ಪಂದ್ಯದ 3ನೇ ದಿನವಾದ ಸೋಮವಾರ ದಿನಾಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತ್ತು. 80 ರನ್‌ಗಳೊಂದಿಗೆ ಅಜೇಯರಾಗುಳಿದಿದ್ದ ವಿಲಿಯಮ್ಸನ್ ಹಾಗೂ 48 ರನ್ ಗಳಿಸಿದ್ದ ವಾಟ್ಲಿಂಗ್ ಮಂಗಳವಾರ ಇನಿಂಗ್ಸ್ ಮುಂದುವರಿಸಿದರು. ದಿನದಾಟ ಅಂತ್ಯವಾಗುವ ಕೆಲವೇ ಗಂಟೆಗಳ ಮುನ್ನ, ತಂಡದ ಮೊತ್ತವನ್ನು 524 ರನ್‌ಗಳಿಗೆ ಈ ಜೋಡಿ ಕೊಂಡೊಯ್ದಿತು. ಆಗ, ನಾಯಕ ಬ್ರೆಂಡನ್ ಮೆಕಲಂ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಹೀಗಾಗಿ, ಶೀಲಂಕಾಕ್ಕೆ 390 ರನ್‌ಗಳ ಗುರಿ ನೀಡಲಾಯಿತು. ದಿನಾಂತ್ಯಕ್ಕೆ ಲಂಕಾ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಪಂದ್ಯ ಗೆಲ್ಲಲು ಅದಕ್ಕಿನ್ನೂ 345 ರನ್ ಬೇಕಿದ್ದು ಇನ್ನೊಂದು ದಿನದ ಕಾಲಾವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.