ವಿಶ್ವಕಪ್ ಪಂದ್ಯವಾಡಲು ಮೈಕಲ್ ಕ್ಲಾರ್ಕ್ ಸಿದ್ಧ
ಗಾಯಗೊಂಡು ಕ್ರಿಕೆಟ್ ಪಂದ್ಯದಿಂದ ಹೊರಗುಳಿದಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮೆನ್ ಮೈಕಲ್ ಕ್ಲಾರ್ಕ್ ಮುಂದಿನ ವಿಶ್ವಕಪ್ ...

Published On :
ಸಿಡ್ನಿ: ಗಾಯಗೊಂಡು ಕ್ರಿಕೆಟ್ ಪಂದ್ಯದಿಂದ ಹೊರಗುಳಿದಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮೆನ್ ಮೈಕಲ್ ಕ್ಲಾರ್ಕ್ ಮುಂದಿನ ವಿಶ್ವಕಪ್ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ. ಸದ್ಯ ಪಂದ್ಯಗಳಿಂದ ಹೊರಗುಳಿದಿರುವ ಕ್ಲಾರ್ಕ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಆದ್ದರಿಂದ ವಿಶ್ವಕಪ್ ಪಂದ್ಯಕ್ಕೆ ಮುನ್ನ ಯಾವುದೇ ಅಭ್ಯಾಸ ಪಂದ್ಯಗಳಲ್ಲಿಯೂ ಅವರು ಭಾಗಿಯಾಗುವುದಿಲ್ಲ. ಅಭ್ಯಾಸ ಪಂದ್ಯಗಳನ್ನಾಡದೆಯೇ ಕ್ಲಾರ್ಕ್ ವಿಶ್ವಕಪ್ ಪಂದ್ಯಾಟಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಲ್ಲಮೂಲಗಳು ಹೇಳಿದ್ದಾರೆ.
ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಕ್ಲಾರ್ಕ್ ಅಡಿಲೇಡ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದರು. ತದನಂತರ ಅದೇ ನೋವು ಉಲ್ಬಣವಾಗಿದ್ದರಿಂದ ಸರಣಿ ಟೆಸ್ಟ್ ಪಂದ್ಯಗಳಿಂದ ಅವರು ಹೊರಗುಳಿಯಬೇಕಾಗಿ ಬಂದಿತ್ತು.
ಇದೀಗ ಕ್ಲಾರ್ಕ್ ಅವರ ಹೆಸರನ್ನು ವಿಶ್ವಕಪ್ ಪಂದ್ಯಕ್ಕಿರುವ 15 ಸದಸ್ಯರ ತಂಡದಲ್ಲಿ ಸೇರಿಸುವ ಸಾಧ್ಯತೆ ದಟ್ಟವಾಗಿದೆ.
33ರ ಹರೆಯದ ಕ್ಲಾರ್ಕ್ 238 ಏಕದಿನ ಪಂದ್ಯಗಳನ್ನಾಡಿದ್ದಾರೆ. ಫೆಬ್ರವರಿ 14ರಂದು ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಲಾರ್ಕ್ ಆರಂಭಿಕ ದಾಂಡಿಗನಾಗಿ ಕ್ರೀಸ್‌ಗೆ ಇಳಿಯುವುದಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಕ್ಲಾರ್ಕ್ ವಾರ್ಮ್ ಅಪ್ ಪಂದ್ಯಗಳಲ್ಲಿಯೂ ಭಾಗಿಯಾಗಿರುವುದಿಲ್ಲ.
ಆದರೆ ಕ್ಲಾರ್ಕ್ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ್ (ಬ್ರಿಸ್ಬೇನ್, ಫೆಬ್ರವರಿ 21 ) ಅಥವಾ ಅಫ್ಘಾನಿಸ್ತಾನ್ (ಪೆರ್ತ್, ಮಾರ್ಚ್ 4) ವಿರುದ್ಧದ ಪಂದ್ಯಗಳನ್ನಾಡಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


