ಕ್ರೀಡೆ

ಭಾರತದ ಅಬ್ಬರಕ್ಕೆ ಅರಬ್ ತತ್ತರ; 102 ರನ್ ಗಳಿಗೆ ಆಲೌಟ್

ನಿರೀಕ್ಷೆಯಂತೆ ಭಾರತ ಮತ್ತು ಯುಎಇ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಯುಎಇ ತತ್ತರಿಸಿದೆ...

ಭಾರತದ ಅಬ್ಬರಕ್ಕೆ ಅರಬ್ ತತ್ತರ;  102 ರನ್ ಗಳಿಗೆ ಆಲೌಟ್
ಯುಎಇ ಆಟಗಾರ
Published On :

ಪರ್ತ್: ನಿರೀಕ್ಷೆಯಂತೆ ಭಾರತ ಮತ್ತು ಯುಎಇ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಯುಎಇ ತತ್ತರಿಸಿದೆ.
ಮೊದಲು ಬ್ಯಾಟಿಂಗ್‌ಗೆ ಇಳಿದ ಯುಎಇ 31.3ನೇ ಓವರ್ ನಲ್ಲಿ 102 ರನ್ ಗಳಿಸಿ ಆಲೌಟ್ ಆಗಿದ್ದು ಭಾರತಕ್ಕೆ 103ರನ್ ಗಳ ಸವಾಲನ್ನೊಡ್ಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಎಇ 2 ನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್  ಕಳೆದು ಕೊಂಡಿತು. ಅಮ್ಜದ್ ಅಲಿ ಮತ್ತು  ಬೆರೆಂಗರ್ ಆರಂಭಿಕ ದಾಂಡಿಗರಾಗಿ ಕ್ರೀಸ್‌ಗಿಳಿದಿದ್ದು, ಉಮೇಶ್ ಯಾದವ್‌ರ ಬಾಲ್‌ಗೆ ಬೆರೆಂಗರ್ ವಿಕೆಟ್ ಕಳೆದುಕೊಂಡಾದ, 5ನೇ ಓವರ್‌ನಲ್ಲಿ ಅಮ್ಜದ್ ಅಲಿ ಭುವನೇಶ್ವರ್ ಬಾಲ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗಿಳಿದ ಭಾರತೀಯ ಮೂಲಕ ಕೃಷ್ಣ ಚಂದ್ರನ್ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 27 ಬಾಲ್‌ಗಳನ್ನೆದುರಿಸಿದ ಕೃಷ್ಣನ್ 4 ರನ್ ಗಳಿಸಿ ಅಶ್ವಿನ್ ಬಾಲ್‌ಗೆ ರೈನಾಗೆ ಕ್ಯಾಚಿತ್ತು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

11ನೇ ಓವರ್‌ನಲ್ಲಿ ಮೊದಲ ಮೂವರು ಆಟಗಾರರು ತಲಾ 4 ರನ್‌ಗಳಿಸಿ ಔಟಾಗಿದ್ದಾರೆ. ಯುಎಇ ಪರ ಎಸ್ ಪಿ ಪಾಟಿಲ್ (7), ಖುರ್ರಮ್ ಖಾನ್ (14) , ರೋಹನ್ ಮುಸ್ತಫಾ (2) ಅಮ್ಜದ್ ಜಾವೇದ್ (2), ಮೊಹಮ್ಮದ್ ನವೀದ್ (6), ಮೊಹಮ್ಮದ್ ತೌಕೀರ್ (1), ಶೈಮಾನ್ ಅನ್ವರ್  (35) ರನ್ ಗಳಿಸಿದ್ದಾರೆ. ಪ್ರಸ್ತುತ ಪಂದ್ಯದಲ್ಲಿ ಎಎಂ ಗುರುಗೆ 10 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಭಾರತ ಪರವಾಗಿ ಅಶ್ವಿನ್ -4, ಯಾದವ್ -2, ಜಡೇಜಾ- 2,  ಭುವನೇಶ್ವರ್ ಕುಮಾರ್- 1   ಮತ್ತು ಮೋಹಿತ್ ಶರ್ಮಾ  -1 ವಿಕೆಟ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.