ತಿಹಾರ್ ಜೈಲಿನಲ್ಲಿದ್ದಾಗ ಶ್ರೀಶಾಂತ್ ಹತ್ಯೆಗೆ ಯತ್ನ?
ಐಪಿಎಲ್ ಪಂದ್ಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿ ಇದೀಗ ತಿಹಾರ್ ಜೈಲಿನಲ್ಲಿರುವ ಬೌಲರ್...

ಕೊಚ್ಚಿ: ಐಪಿಎಲ್ ಪಂದ್ಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಫಾಸ್ಟ್ ಬೌಲರ್ ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಹತ್ಯೆಗೆ ಯತ್ನ ನಡೆದಿದೆ ಎಂದು ಶ್ರೀಶಾಂತ್‌ರ ಭಾವ ಮಧು ಬಾಲಕೃಷ್ಣನ್ ದೂರಿದ್ದಾರೆ.
ಶ್ರೀಶಾಂತ್ ತಿಹಾರ್ ಜೈಲಿನಲ್ಲಿದ್ದಾಗ ಒಬ್ಬ ಗೂಂಡಾ ಮಾರಕಾಸ್ತ್ರ ಬಳಸಿ ಮೇಲೆ
ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಶ್ರೀಶಾಂತ್ ಪಾರಾಗಿದ್ದಾನೆ ಎಂದು ಹಿನ್ನೆಲೆ ಗಾಯಕನಾಗಿರುವ ಮಧು ಬಾಲಕೃಷ್ಣನ್ ಕೇರಳದ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.
ಜೈಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಕೂಡಲೇ ಶ್ರೀಶಾಂತ್‌ನ್ನು ಬೇರೆ ಸೆಲ್‌ಗೆ ವರ್ಗಾಯಿಸಲಾಗಿತ್ತು. ಆದರೆ ಹಲ್ಲೆಗೆ ಯತ್ನಿಸಿದವನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ.
ಅದೇ ವೇಳೆ ಈ ಘಟನೆಯ ಹಿಂದೆ ಏನೇನು ಕೈವಾಡಗಳಿವೆಯೋ? ಎಂಬುದರ ಬಗ್ಗೆಯೂ ತನಗೇನೂ ಗೊತ್ತಿಲ್ಲ ಎಂದು ಮಧು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


