ನಾಳೆ ಭಾರತ Vs ಯುಎಇ ವಿಶ್ವಕಪ್ ಪಂದ್ಯ: ಏನಿದೆ ವಿಶೇಷ?
ಕ್ರಿಕೆಟ್‌ಲೋಕಕ್ಕೆ ಪುಟ್ಟ ಹೆಜ್ಜೆಯನ್ನಿಡುತ್ತಿರುವ ಯುಎಇ ತಂಡ ನಾಳೆ ಎರಡು ಬಾರಿ ವಿಶ್ವಕಪ್ ವಿಜೇತ ತಂಡವಾದ ಟೀಂ ಇಂಡಿಯಾವನ್ನು...

ಕ್ರಿಕೆಟ್‌ಲೋಕಕ್ಕೆ ಪುಟ್ಟ ಹೆಜ್ಜೆಯನ್ನಿಡುತ್ತಿರುವ ಯುಎಇ ತಂಡ ನಾಳೆ ಎರಡು ಬಾರಿ ವಿಶ್ವಕಪ್ ವಿಜೇತ ತಂಡವಾದ ಟೀಂ ಇಂಡಿಯಾವನ್ನು ಎದುರಿಸಲಿದೆ. ಯುಎಇ ತಂಡವನ್ನು ಭಾರತ ಸುಲಭವಾಗಿ ಸೋಲಿಸಬಹುದು ಎಂಬ ಆತ್ಮವಿಶ್ವಾಸ ಭಾರತೀಯರಲ್ಲೂ ಇದೆ. ಆದಾಗ್ಯೂ,
ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಭಾರತವನ್ನು ಯುಎಇ ಹೇಗೆ ಎದುರಿಸಲಿದೆ? ಎಂಬುದು ಎಲ್ಲರಲ್ಲೂ ಕುತೂಹಲ ಸೃಷ್ಟಿಸಿದೆ.
ವಿಶ್ವಕಪ್ ಕ್ರಿಕೆಟ್ ಯುದ್ಧದಲ್ಲಿ ಯುಎಇ ತಂಡ ಪ್ರಬಲ ತಂಡಗಳ ಪಟ್ಟಿಯಲ್ಲಿ ಇಲ್ಲದೇ ಇರಬಹುದು ಆದರೆ ಯಾವುದೇ ತಂಡವನ್ನು ದುರ್ಬಲವೆಂದು ಪರಿಗಣಿಸುವಂತಿಲ್ಲ. ಯಾಕೆಂದರೆ ವಿಶ್ವಕಪ್ ಆರಂಭವಾದಾಗ ಐರ್‌ಲ್ಯಾಂಡ್‌ನ್ನು ದುರ್ಬಲ ತಂಡವೆಂದು ಹೇಳಲಾಗುತ್ತಿತ್ತು. ಆದರೆ ಐರ್‌ಲ್ಯಾಂಡ್ ಪ್ರಬಲ ತಂಡವೆನಿಸಿದ ವೆಸ್ಟ್ ಇಂಡೀಸ್‌ನ್ನೇ ಸೋಲಿಸಿತ್ತು. ಯುಎಇ ತಂಡವನ್ನು ಕೂಡಾ ಪರಾಭವಗೊಳಿಸಿರುವ ಐರ್‌ಲ್ಯಾಂಡ್ ಆಡಿದ ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಇತ್ತ ಜಿಂಬಾಬ್ವೆ ಮತ್ತು ಐರ್‌ಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಪರಾಭವ ಅನುಭವಿಸಿರುವ ಯುಎಇ ಜಯದ ಅವಕಾಶವನ್ನು ಹುಡುಕುತ್ತಿದೆ.
ಇಂತಿರ್ಪ, ನಾಳೆ ನಡೆಯಲಿರುವ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿದೆ. ಅದೇನೆಂದರೆ,
ಯುಎಇ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಇದ್ದಾರೆ ಎಂಬುದು.
ಸ್ವಪ್ನಿಲ್ ಪಾಟಿಲ್: ಮುಂಬೈ ಮೂಲಕ ಸ್ವಪ್ನಿಲ್ ರಣಜಿ ತಂಡದಲ್ಲಿ ಸ್ಥಿರ ಸ್ಥಾನವನ್ನು ವಿಫಲನಾದ ಮೇಲೆ ಯುಎಇ ಹೋಗಿದ್ದರು. ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಟೀಂನಲ್ಲಿ ರಣಜಿ ಪಂದ್ಯವನ್ನಾಡಿದ್ದ ಸ್ವಪ್ನಿಲ್, ಮುಂಬೈ ಪರ ಅಂಡರ್ 14 ಮತ್ತು ಅಂಡರ್ 22 ಟೀಂನಲ್ಲಿಯೂ ಆಡಿದ್ದರು. ಯುಎಇನಲ್ಲಿ ಕೆಲಸ ಸಿಕ್ಕಾಗ 29ರ ಹರೆಯದ ಪಾಟಿಲ್ ಅಲ್ಲಿಗೆ ಶಿಫ್ಟ್ ಆಗಿ ಬಿಟ್ಟರು. ಅಲ್ಲಿಗೆ ಹೋದ ಮೇಲೆ 2010ರಲ್ಲಿ ಐಸಿಸಿ ಇಂಟರ್ ಕಾಂಟಿನೆಂಟಲ್ ಕಪ್ ಮೂಲಕ ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದೀಗ ವಿಶ್ವಕಪ್‌ನಲ್ಲಿ ಯುಎಇ ತಂಡದ ಪರವಾಗಿ ಆಡುತ್ತಿದ್ದಾರೆ.
ಕೃಷ್ಣ ಚಂದ್ರನ್ ಕರಾಟೆ: ದಿನೇಶ್ ಕಾರ್ತಿಕ್ ಜತೆ ಅಂತರ್ ಶಾಲಾ ಟೂರ್ನಮೆಂಟ್‌ಗಳನ್ನಾಡಿದ ಕೃಷ್ಣ ಚಂದ್ರನ್, ರೋಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ ಜತೆಗೆ ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದರು. ಕೇರಳ ತಂಡದ ಪರ ಅಂಡರ್ 19 ಟೀಂನಲ್ಲಿ ಆಡುವಾಗ ಎಸ್. ಶ್ರೀಶಾಂತ್ ಜತೆ ರೂಂ ಶೇರ್ ಮಾಡಿಕೊಂಡಿದ್ದರು. ಇದೀಗ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿರುವ ಕೃಷ್ಣ ಚಂದ್ರನ್ ಟೀಂ ಇಂಡಿಯಾ ವಿರುದ್ಧ ಸೆಣಸಾಡಲಿದ್ದಾರೆ. ಕೆಲಸಕ್ಕಾಗಿ ದುಬೈಗೆ ಹೋಗಿ ಅಲ್ಲಿ ನೆಲೆ ಕಂಡುಕೊಂಡಿರುವ ಕೇರಳಿಗರ ಕಥೆಗಳಿಗೆ ಕೃಷ್ಣ ಚಂದ್ರನ್‌ನ ಕಥೆಯೂ ಈ ಮೂಲಕ ಸೇರ್ಪಡೆಯಾಗುತ್ತಿದೆ.
ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ 400ಕ್ಕಿಂತಲೂ ಹೆಚ್ಚು ರನ್ ದಾಖಲಿಸಬಹುದೆ? ವಿಶ್ವಕಪ್‌ನಲ್ಲಿ ಯುಎಇ ವಿರುದ್ಧ ಅತೀ ಹೆಚ್ಚು ರನ್ ದಾಖಲಿಸಲು ಭಾರತಕ್ಕೆ ಇದೊಂದು ಉತ್ತಮ ಅವಕಾಶ ಎಂಬುದು ತಜ್ಞರ ಅಂಬೋಣ. ನಾಳೆ ನಡೆಯುವ ಪಂದ್ಯದಲ್ಲಿ ಯುಎಇ ಯಾವ ರೀತಿ ಪ್ರದರ್ಶನ ನೀಡಲಿದೆ? ಭಾರತ ಏನೆಲ್ಲಾ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ? ಕಾದು ನೋಡೋಣ.
-ಕ್ರಿಕೆಟ್ ಪ್ರೇಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


