ಯುಎಇ ಬಗ್ಗೆ ಐರ್ಲೆಂಡ್ ಎಚ್ಚರದಿಂದಿರಲಿ

ಬ್ರಿಸ್ಬೇನ್: ಈ ಸಲದ ವಿಶ್ವಕಪ್‍ನಲ್ಲಿ ಡಾರ್ಕ್ ಹಾರ್ಸ್‍ಗಳಲ್ಲಿ ಒಂದಾಗಿರುವ ಐರ್ಲೆಂಡ್, ಹನ್ನೊಂದನೇ ಆವೃತ್ತಿಯಲ್ಲಿ ಭರ್ಜರಿ ಆರಂಭವನ್ನೇ ಪಡೆದಿದೆ. ಈ ಶುಭಾರಂಭವನ್ನು ಮತ್ತೆ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಛಲದಲ್ಲಿರುವ ಐರ್ಲೆಂಡ್ ಆಟಗಾರರ ಎದುರು ಈಗ ದುರ್ಬಲ ಸವಾಲು ಒಂದು ಕಾದಿದೆ.
ಬ್ರಿಸ್ಬೇನ್‍ನಲ್ಲಿ ಬುಧವಾರ `ಎ' ಗುಂಪಿನ ಪಂದ್ಯದಲ್ಲಿ ಐರ್ಲೆಂಡ್, ಯುನೈಟೆಡ್ ಅರಬ್ ಎಮಿರೇಟ್ಸ್‍ನ್ನು (ಯುಎಇ) ಎದುರಿಸಲಿದೆ. ನೆಲ್ಸನ್‍ನಲ್ಲಿ ಆಡಲಾದ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್‍ಗಳಿಂದ ಜಯಭೇರಿ ಬಾರಿಸಿತ್ತು.
ವೆಸ್ಟ್ ಇಂಡೀಸ್ ಒಡ್ಡಿದ್ದ 305 ರನ್‍ಗಳ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ್ದ ಐರ್ಲೆಂಡ್, ಇನ್ನೂ 25 ಎಸೆತಗಳು ಉಳಿದಿರುವಂತೆಯೇ 6 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿ ಗೆಲವಿನ ಕೇಕೆ ಹಾಕಿತ್ತು.
ಈ ಪಂದ್ಯದಲ್ಲಿ ಅತ್ಯುತ್ತಮ ಫಾರ್ಮ್ ತೋರಿದ್ದ ಪಾಲ್ ಸ್ಟಿರ್ಲಿಂಗ್, ಎಡ್ ಜಾಯ್ ಮತ್ತು ನಿಯಲ್ ಓಬ್ರಿಯಾನ್‍ರ ಮೇಲೆ ತಂಡ ಈ ಬಾರಿಯೂ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಉಳಿದಂತೆ, ಆರಂಭಿಕ ಬ್ಯಾಟ್ಸ್‍ಮನ್, ನಾಯಕ ಪೋರ್ಟರ್ ಫೀಲ್ಡ್, ಬಲ್ಬಿರ್ನೆ, ವಿಕೆಟ್ ಕೀಪರ್ ವಿಲ್ಸನ್, ಕೆವಿನ್ ಒಬ್ರಿಯಾನ್ ಮೇಲೂ ಭರವಸೆ ಹೊಂದಿದೆ.
ಹಾಗೆಯೇ ಬೌಲಿಂಗ್‍ನಲ್ಲಿ ಮೂನಿ, ಸೊರೆನ್ಸೆನ್, ಮೆಕ್‍ಬ್ರಿಯಾನ್ ಮತ್ತು ಡಾಕ್ರೆಲ್ ಉತ್ತಮ ಲೈನ್ ಆ್ಯಂಡ್ ಲೆಂಗ್ತ್ ದಾಳಿ ನಡೆಸಲು ಶಕ್ತರಾದರೆ, ಐರ್ಲೆಂಡ್‍ಗೆ ಸುಲಭ ಗೆಲವು ದಕ್ಕುವುದರಲ್ಲಿ ಅನುಮಾನವಿಲ್ಲ. ಹಾಗೆಂದು, ಯುಎಇ ತಂಡವನ್ನು ಹಗುರವಾಗಿ ಕಾಣುವುದಿಲ್ಲ. ಐರ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಯುಎಇ ಆಟಗಾರರಿಂದ ಕಠಿಣ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ಜಿಂಬಾಬ್ವೆ ವಿರುದ್ಧ ಆಡಿದ್ದ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಯುಎಇ 4 ವಿಕೆಟ್‍ಗಳ ಸೋಲು ಕಂಡಿತ್ತು. ಆದರೂ, ಈ ಪಂದ್ಯದಲ್ಲಿ ಜಿಂಬಾಬ್ವೆ ಮುಂದೆ ಕಠಿಣ ಸವಾಲನ್ನೇ ನಿಲ್ಲಿಸಿತ್ತು. ಉತ್ತಮ ಸಾಂಘಿಕ ಪ್ರದರ್ಶನ ನೀಡಿದ್ದ ಯುಎಇ ಸೋಲಿಗೆ ಅನುಭವದ ಕೊರತೆ ಕಾರಣವಾಗಿತ್ತು. ಆದರೆ, ಇಲ್ಲಿನ ಗುಣಮಟ್ಟದ ಪ್ರದರ್ಶನ ಯುಎಇ ಆಟಗಾರರ ಆತ್ಮವಿಶ್ವಾಸ ದುಪ್ಪಟ್ಟು ಹೆಚ್ಚಾಗುವಂತೆ ಮಾಡಿದೆ. ಹಾಗಾಗಿ, ಐರ್ಲೆಂಡ್ ಎಚ್ಚರಿಕೆಯಿಂದಲೇ ಇರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


