ಸಾನಿಯಾ ಜೋಡಿಗೆ ನಿರಾಸೆ
ಭಾರತದ ಹಿರಿಯ ಆಟಗಾರ್ತಿ ಹಾಗೂ ಅವರ ಜೊತೆಗಾತಿ ಚೈನೀಸ್ ತೈಪೇನಸಿಯೇ ಸು-ವಿ ಜೋಡಿ, ದುಬೈ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹೊರನಡೆದಿದೆ...

ದುಬೈ: ಭಾರತದ ಹಿರಿಯ ಆಟಗಾರ್ತಿ ಹಾಗೂ ಅವರ ಜೊತೆಗಾತಿ ಚೈನೀಸ್ ತೈಪೇನಸಿಯೇ ಸು-ವಿ ಜೋಡಿ, ದುಬೈ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹೊರನಡೆದಿದೆ.
ಬುಧವಾರ ನಡೆದ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಜೋಡಿ, ರಷ್ಯಾದ ಅಳಲಾ ಕುದ್ರತ್ಸೆವಾ ಮತ್ತು ಅನಾಸ್ತೇಸಿಯಾ ಪಾವ್ಲಿಚೆಂಕೋವಾ ಜೋಡಿ ವಿರುದ್ಧ 4-6, 6-4, 7-10 ಸೆಟ್‌ಗಳ ಅಂತರದಲ್ಲಿ ಸೋಲನುಭವಿಸಿತು.
ಆರಂಭಿಕ ಸೆಟ್‌ನಲ್ಲೇ ಸಾನಿಯಾ-ಸಿಯೇ ಜೋಡಿ ಮುಗ್ಗಿರಿಸಿದ್ದರೂ, ಎರಡನೇ ಸೆಟ್‌ನಲ್ಲಿ ತಿರುಗಿಬಿದ್ದಿತು. ಇದರ ಪರಿಣಾಮ, 2ನೇ ಸೆಟ್‌ನಲ್ಲಿ ಭಾರತ-ತೈಪೇ ಜೋಡಿ ರೋಚಕ ಗೆಲವು ದಾಖಲಿಸಿ ಎದುರಾಳಿ ಜೋಡಿಗೆ ಸಡ್ಡುಹೊಡೆಯಿತು. ಆದರೆ, ತೀವ್ರ ಹಣಾಹಣಿಯಿಂದ ಕೂಡಿದ್ದ ನಿರ್ಣಾಯಕ ತೃತೀಯ ಸೆಟ್‌ನಲ್ಲಿ ಅಂಕಗಳನ್ನು ಪೇರಿಸುವತ್ತ ಎರಡೂ ಜೋಡಿಗಳು ಪರಸ್ಪರ ತೀವ್ರ ಸೆಣಸಾಟ ನಡೆಸಿದವಾದರೂ, ಅಂತಿಮವಾಗಿ ರಷ್ಯಾ ಜೋಡಿಯ ಪಾಲಿಗೇ ಜಯ ಒಲಿಯಿತು.
ಮಕಾರೋವಾಗೆ ಮುನ್ನಡೆ: ರಷ್ಯಾದ ಆಟಗಾರ್ತಿ ಏಕ್ತರಿನಾ ಮಕಾರೊವಾ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತು ಪ್ರವೇಶಿದ್ದಾರೆ. ಇಂದೇ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು, ಕಜಕಿಸ್ತಾನದ ಜಾರಿಯಾ ದಿಯಾಸ್ ವಿರುದ್ಧ 6-3, 6-4 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


