ರೋಹಿತ್ ಅಬ್ಬರ: ಭಾರತಕ್ಕೆ ಸುಲಭ ಜಯ
ಕೊನೆಗೂ ಕಾಂಗರೂ ನಾಡಿನಲ್ಲಿ ಟೀಂ ಇಂಡಿಯಾ ಸುಮಾರು ಎರಡೂವರೆ ತಿಂಗಳ ನಂತರ ಮೊದಲ ಜಯದ ಖುಷಿ ಆಚರಿಸಿದೆ...

ಅಡಿಲೇಡ್: ಕೊನೆಗೂ ಕಾಂಗರೂ ನಾಡಿನಲ್ಲಿ ಟೀಂ ಇಂಡಿಯಾ ಸುಮಾರು ಎರಡೂವರೆ ತಿಂಗಳ ನಂತರ ಮೊದಲ ಜಯದ ಖುಷಿ ಆಚರಿಸಿದೆ. ಈ ಜಯ ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಬಂದರೂ, ಪ್ರತಿಷ್ಠಿತ ವಿಶ್ವಕಪ್ ದೃಷ್ಟಿಯಿಂದ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಲು ಇದು ಸಹಾಯಕವಾಗಲಿದೆ.
ವಿಶ್ವಕಪ್‍ಗೆ ಮುನ್ನ ನಡೆದ ತನ್ನ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 153 ರನ್‍ಗಳ ಭಾರಿ ಅಂತರದಿಂದ ಅಫ್ಘಾನಿಸ್ತಾನ ವಿರುದ್ಧ ಗೆಲವಿನ ನಗೆ ಬೀರಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 364 ರನ್‍ಗಳ ಬೃಹತ್ ಮೊತ್ತ ಸಂಪಾದಿಸಿತು.
ಆರಂಭಿಕ ರೋಹಿತ್ ಶರ್ಮಾ ಸ್ಫೋಟಕ ಶತಕ ಬಾರಿಸಿದರು. ಅವರು ಕೇವಲ 122 ಎಸೆತಗಳಲ್ಲಿ 12 ಬೌಂಡರಿ, 7 ಭರ್ಜರಿ ಸಿಕ್ಸರ್ ಒಳಗೊಂಡ 150 ರನ್‍ಗಳಿಸಿ ಗಮನ ಸೆಳೆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (ಅಜೇಯ 88, 61 ಎಸೆತ, 12
ಬೌಂಡರಿ, 2 ಸಿಕ್ಸರ್) ಮತ್ತು ಸುರೇಶ್ ರೈನಾ (75ರನ್, 71 ಎಸೆತ, 5 ಬೌಂಡರಿ, 3 ಸಿಕ್ಸರ್) ಆಕರ್ಷಕ ಅರ್ಧಶತಕ ಗಳಿಸಿ ತಂಡದ ಅತ್ಯುತ್ತಮ ಮೊತ್ತಕ್ಕೆ ಕಾರಣರಾದರು.
ಉತ್ತರವಾಗಿ 365 ರನ್‍ಗಳ ಕಠಿಣ ಗುರಿ ಬೆಂಬತ್ತಿದ ಅಫ್ಘಾನಿಸ್ತಾನ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 211 ರನ್‍ಗಳಿಸಲಷ್ಟೇ ಶಕ್ತವಾಯಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ನವ್ರೊಜ್ ಮಂಗಲ್ 85 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಹೊಂದಿದ್ದ 60 ರನ್ ಗಳಿಸಿದ್ದೇ ತಂಡದ ಪರ ಉತ್ತಮ ವೈಯಕ್ತಿಕ ಸಾಧನೆಯಾಯಿತು. ಭಾರತದ ಬೌಲರ್‍ಗಳ ಪೈಕಿ ಮೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಉರುಳಿಸಿದರು.
ಅಫ್ಘಾನಿಸ್ತಾನ ತಂಡದ ಆಟಗಾರರಲ್ಲಿ ಅನುಭವದ ಕೊರತೆ ಇತ್ತು. ಆದರೂ ಸಹ ಮೊಹಮದ್ ನಬಿ ನಾಯಕತ್ವದ ತಂಡ, ಇನ್ನೂರಕ್ಕಿಂತಲೂ ಹೆಚ್ಚು ಮೊತ್ತ ಗಳಿಸಿದ್ದು, ಅದಕ್ಕೆ ತೃಪ್ತಿಯನ್ನೇ ತಂದಿತ್ತು. ಫೆ.14 ರಂದು ವಿಶ್ವಕಪ್ ಅಭಿಯಾನಕ್ಕೆ ಚಾಲನೆ ದೊರೆಯಲಿದ್ದು, ಮರು ದಿನ ಫೆ.15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ 50 ಓವರುಗಳಲ್ಲಿ 5 ವಿಕೆಟ್‍ಗೆ 364 (ರೋಹಿತ್ ಶರ್ಮಾ 150, ಅಜಿಂಕ್ಯ ರಹಾನೆ ಅಜೇಯ 88, ಸುರೇಶ್ ರೈನಾ 75, ಹಮೀದ್ ಹಸನ್ 49ಕ್ಕೆ1). ಅಫ್ಘಾನಿಸ್ತಾನ 50 ಓವರುಗಳಲ್ಲಿ 8 ವಿಕೆಟ್‍ಗೆ 211 (ನವ್ರೊಜ್ ಮಂಗಲ್ 60, ಉಸ್ಮಾನ್ ಘನಿ 44, ಆರ್. ಜಡೇಜಾ 38ಕ್ಕೆ2, ಮೋಹಿತ್ ಶರ್ಮಾ 40ಕ್ಕೆ2, ರೈನಾ 9ಕ್ಕೆ1, ಉಮೇಶ್ ಯಾದವ್ 35ಕ್ಕೆ1, ಆರ್. ಅಶ್ವಿನ್ 37ಕ್ಕೆ1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


