ಕ್ರೀಡೆ

ಗೆಲವಿನ ನಿರೀಕ್ಷೆಯಲ್ಲಿ ಬಿಎಫ್‌ಸಿ

ಮಲೇಷ್ಯಾದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ನಡೆದ ಎಎಫ್ಸಿ ಚಾಂಪಿಯನ್ಸ್ ಲೀಗ್‌ನ ಪ್ರಾಥಮಿಕ ಸುತ್ತಿನಲ್ಲಿ...

ಗೆಲವಿನ ನಿರೀಕ್ಷೆಯಲ್ಲಿ ಬಿಎಫ್‌ಸಿ
Published On :

ಬೆಂಗಳೂರು: ಮಲೇಷ್ಯಾದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ನಡೆದ ಎಎಫ್ ಸಿ ಚಾಂಪಿಯನ್ಸ್ ಲೀಗ್‌ನ ಪ್ರಾಥಮಿಕ ಸುತ್ತಿನಲ್ಲಿ ಸ್ಥಳೀಯ ಕ್ಲಬ್ ತಂಡದ ವಿರುದ್ಧ ಸೋಲನುಭಾವಿಸಿದರೂ ಗಮನಾರ್ಹ ಪ್ರದರ್ಶನ ತೋರಿದ್ದ ಬೆಂಗಳೂರು ಎಫ್‌ಸಿ ಈಗ ಐ-ಲೀಗ್‌ನ ತನ್ನ ಮುಂದಿನ ಪಂದ್ಯದಲ್ಲಿ ಭಾರತ್ ಎಫ್‌ಸಿ ವಿರುದ್ಧ ಗೆಲವಿನ ಕನಸು ಹೊತ್ತು ಕಣಕ್ಕಿಳಿಯಲು ಸಿದ್ದವಾಗಿದೆ.

ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಇದೇ ಮೊದಲ ಬಾರಿಗೆ ಐ-ಲೀಗ್ ಪ್ರವೇಶ ಪಡೆದಿರುವ ಭಾರತ್ ಎಫ್‌ಸಿ ಗೆಲವು ದಾಖಲಿಸುವ ನಿರೀಕ್ಷೆ ಇದೆ. ಬಿಎಫ್‌ಸಿ ತಂಡದ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಬಿಎಫ್‌ಸಿ ಎದುರು ಭಾರತ್ ಎಫ್‌ಸಿ ದುರ್ಬಲ ತಂಡ ಎಂಬಂತಿದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ 1 ಜಯ, 1 ಡ್ರಾ ಮತ್ತು 2 ಸೋಲಿನ ಫಲಿತಾಂಶ ಅನುಭವಿಸಿರುವ ಬಿಎಫ್‌ಸ ತಂಡ ಒಟ್ಟು 4 ಅಂಕಗಳಿಸಿದೆ. ಮತ್ತೊಂದೆಡೆ ಭಾರತ್ ಎಫ್‌ಸಿ ಆಡಿರುವ 2 ಪಂದ್ಯಗಳ ಪೈಕಿ 1 ಡ್ರಾ ಹಾಗೂ 1 ಸೋಲಿನೊಂದಿಗೆ ಕೇವಲ 1 ಅಂಕದ ಸಂಪಾದನೆಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.