ಕ್ರೀಡೆ

ಡೆಲ್ಲಿಗೆ ಜಯ

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಡೆಲ್ಲಿ ವೇವ್‍ರೈಡರ್ಸ್ ತಂಡ ಹಾಕಿ ಇಂಡಿಯಾ...

ಡೆಲ್ಲಿಗೆ ಜಯ
ಡೆಲ್ಲಿ ವೇವ್‍ರೈಡರ್ಸ್
Published On :

ನವದೆಹಲಿ: ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಡೆಲ್ಲಿ ವೇವ್‍ರೈಡರ್ಸ್ ತಂಡ ಹಾಕಿ ಇಂಡಿಯಾ ಲೀಗ್ ಟೂರ್ನಿಯಲ್ಲಿ ದಬಾಂಗ್ ಮುಂಬೈ ವಿರುದ್ಧ ಅರ್ಹ ಗೆಲವು ದಾಖಲಿಸಿದೆ.

ಭಾನುವಾರ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವೇವ್‍ರೈಡರ್ಸ್ ತಮ್ಮ ಎದುರಾಳಿ ದಬಾಂಗ್ ಮುಂಬೈ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲವು ದಾಖಲಿಸಿತು. ಈ ಗೆಲವಿನೊಂದಿಗೆ ಡೆಲ್ಲಿ ತಂಡ ಟೂರ್ನಿಯಲ್ಲಿ ಮೊದಲ ಗೆಲವು ದಾಖಲಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಸಂಪಾದಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದೆ.

ಡೆಲ್ಲಿ ತಂಡದ ಪರ ಸಿಮೊನ್ ಚಿಲ್ಡ್, ಲಾಯ್ಡ್ ನೊರಿಸ್ ಜೋನ್ಸ್, ಆಕಾಶ್ ದೀಪ್ ಸಿಂಗ್ ಗೋಲು ದಾಖಲಿಸಿದರೆ, ದಬಾಂಗ್ ಮುಂಬೈ ತಂಡದ ಪರ ಅರ್ಜುನ್ ಹಾಲಪ್ಪ ಗೋಲು
ದಾಖಲಿಸಿದರು. ಪಂದ್ಯದ ಆರಂಭದಿಂದ ಅಂತ್ಯದವರೆಗೆ ಡೆಲ್ಲಿ ಬಿಗಿ ಹಿಡಿತ ಸಾ„ಸಿ ಪಂದ್ಯದಲ್ಲಿ ಸುಲಭ ಗೆಲವು ದಾಖಲಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.