ಹರಿಣಗಳಿಗೆ ಮತ್ತೆ ಮುಖಭಂಗ
ವಿಶ್ವದ ನಂ.1 ಟೆಸ್ಟ್ ತಂಡವೆನಿಸಿರುವ ದ. ಆಫ್ರಿಕಾ ಮೇಲೆ ದುರ್ದೆಸೆಯ ದಟ್ಟ ಕಾರ್ಮೋಡ ಕವಿದುಕೊಂಡಂತಾಗಿದೆ.

ಡರ್ಬನ್: ವಿಶ್ವದ ನಂ.1 ಟೆಸ್ಟ್ ತಂಡವೆನಿಸಿರುವ ದ. ಆಫ್ರಿಕಾ ಮೇಲೆ ದುರ್ದೆಸೆಯ ದಟ್ಟ ಕಾರ್ಮೋಡ ಕವಿದುಕೊಂಡಂತಾಗಿದೆ.
ಈ ವರ್ಷಾಂತ್ಯದಲ್ಲಿ ಅದು ಭಾರತ ತಂಡದ ವಿರುದ್ಧ ಅನುಭವಿಸಿದ ದಯನೀಯ ಸೋಲಿನ ಬಳಿಕ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನೂ ಸೋಲಿನೊಂದಿಗೆ ಆರಂಭಿಸಿದ್ದು, ಹೊಸ ವರ್ಷದಲ್ಲಿ ಅದರ ಅದೃಷ್ಟ ಬದಲಾಗುತ್ತದೋ ಇಲ್ಲವೋ ಕಾದು ನೋಡಬೇಕಿದೆ.
ಬುಧವಾರ ಮುಕ್ತಾಯ ಕಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ, ಮೊದಲ ಟೆಸ್ಟ್ ನಲ್ಲಿ 241 ರನ್ ಹೀನಾಯ ಸೋಲನುಭವಿಸಿದೆ.
ಇದರಿಂದಾಗಿ ಈ ಗೆಲುವಿನೊಂದಿಗೆ 4 ಪಂದ್ಯ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ
ಸಾಧಿಸಿದಂತಾಗಿದೆ. ಇತ್ತ 2015ರ ಏಪ್ರಿಲ್‍ನಲ್ಲಿ ನಡೆದಿದ್ದ ಗ್ರನೇಡಾ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಿಸಿ ಆನಂತರ ತವರಿನಾಚೆ ಸತತ 14 ಟೆಸ್ಟ್ ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ಮತ್ತೆ ವಿದೇಶದಲ್ಲಿ ಜಯದ ಹಳಿಗೆ ಮರಳಿದೆ.
ಭಾನುವಾರ(ಜ.3 ) ದಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಹೊಸ ವರ್ಷ ದ.ಆಫ್ರಿಕಾಗೆ ಅದೃಷ್ಟ ತಂದುಕೊಡುತ್ತದೋ ಇಲ್ಲವೋ ಎಂಬುದು ಕೌತುಕ ಕೆರಳಿಸಿದೆ. ನಾಯಕ ಹಾಶೀಂ ಆಮ್ಲಾ ದಿವ್ಯ ವೈಫಲ್ಯವು ಕೂಡಾ ಹರಿಣಗಳ ಈ ದಯನೀಯ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಇನ್ನು ಗೆಲ್ಲಲು 416 ರನ್ ಗುರಿ ಪಡೆದು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದ ದ.ಆಫ್ರಿಕಾ ಐದನೇ ದಿನದಾಟದಂದು ಯಾವುದೇ ಪ್ರತಿರೋಧ ತೋರದೆ 71 ಓವರ್‍ಗಳಲ್ಲಿ 174 ರನ್‍ಗಳಿಗೆ ಆಲೌಟ್ ಆಗಿ ಆಂಗ್ಲರಿಗೆ ಶರಣಾಯಿತು. 37 ರನ್‍ಗಳೊಂದಿಗೆ ಕ್ರೀಸ್‍ನಲ್ಲಿದ್ದ ಎಬಿ ಡಿವಿಲಿಯರ್ಸ್ ಏಕೈಕ ಭರವಸೆಯಾಗಿ ಉಳಿದಿದ್ದರು. ಆದರೆ ದಿನದ ಮೊದಲ ಓವರ್ ನಲ್ಲಿಯೇ ಅವರು ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ದ.ಆಫ್ರಿಕಾ ಪತನ ನಿಶ್ಚಿತವೆನಿಸಿತು. ಅವರ ನಿರ್ಗಮನದ ನಂತರ ಮಧ್ಯಮ ಕ್ರಮಾಂಕದಲ್ಲಿ ಜೆಪಿ ಡುಮಿನಿ ಅಜೇಯ 26 ರಂ ಕಳೆಹಾಕಿದ್ದನ್ನು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲು ವಿಫಲವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


