ಫಿಫಾ ಮಾಜಿ ಉಪಾಧ್ಯಕ್ಷ ಬಂಧನ
ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಪಿಫಾ) ಪದಚ್ಯುತ ಉಪಾಧ್ಯಕ್ಷಯೂಗಿನಿಯೊ ಫಿಗ್ಯುರೆಡೊ ಅವರನ್ನು ಅವರ ಸ್ವದೇಶವಾದ ಉರುಗ್ವೆಯಲ್ಲಿ...

ಮೊಂಟೆವಿಡಿಯೊ: ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಪಿಫಾ) ಪದಚ್ಯುತ ಉಪಾಧ್ಯಕ್ಷ ಯೂಗಿನಿಯೊ ಫಿಗ್ಯುರೆಡೊ ಅವರನ್ನು ಅವರ ಸ್ವದೇಶವಾದ ಉರುಗ್ವೆಯಲ್ಲಿ ಬಂಧಿಸಲಾಗಿದೆ.
ಪಿಫಾ ಹಗರಣಕ್ಕೆ ಸಂಬಂಧಪಟ್ಟಂತೆ ಸ್ವಿಜರ್ಲೆಂಡ್ ಪೊಲೀಸರಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದಯೂಗಿನಿಯೊ ಅವರನ್ನು ಇತ್ತೀಚೆಗೆ ಉರುಗ್ವೆ ಪೊಲೀಸರು ತಮ್ಮ ವಶಕ್ಕೆ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ, ಅವರನ್ನು ಸ್ವಿಜರ್ಲೆಂಡ್‍ನಿಂದ ಉರುಗ್ವೆಗೆ ಕಳುಹಿಸಲಾಗಿತ್ತು.
ಗುರುವಾರ ಉರುಗ್ವೆಗೆ ಬಂದಿಳಿದ ಕೂಡಲೇ ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದರು ಎಂದು ಹೇಳಲಾಗಿದೆ. ಬಂಧನ ನಂತರವೇ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರ ಮೇಲೆ ಮುಂದೆ ಗೃಹಬಂಧನ ಹೇರಬಹುದೆಂಬ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


