ಕ್ರೀಡೆ

ಇಂಡೋ-ಪಾಕ್ ಕ್ರಿಕೆಟ್ ಬಿಸಿಸಿಐ-ಪಿಸಿಬಿ ನಿರ್ಧರಿಸಲ್ಲ: ಶಶಾಂಕ್ ಮನೋಹರ್

ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಕೇವಲ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಾಗೂ ಭಾರತೀಯ...

ಇಂಡೋ-ಪಾಕ್ ಕ್ರಿಕೆಟ್ ಬಿಸಿಸಿಐ-ಪಿಸಿಬಿ ನಿರ್ಧರಿಸಲ್ಲ: ಶಶಾಂಕ್ ಮನೋಹರ್
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್
Published On :

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಕೇವಲ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ   (ಬಿಸಿಸಿಐ)ಗಳಷ್ಟೇ ನಿರ್ಧರಿಸುವಂಥ ದ್ದಾಗಿರದೆ ಅದು ಉಭಯ ದೇಶಗಳ ಘನ ಸರ್ಕಾರಗಳು  ನಿರ್ಧರಿಸುವಂಥದ್ದು ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್   ತಿಳಿಸಿದ್ದಾರೆ.

``ಭಾರತ ಮತ್ತು ಪಾಕಿಸ್ತಾನ ನಡುವಣದ ದ್ವಿಪಕ್ಷೀಯ ಸರಣಿಯು ಅತ್ಯಂತ ಸಂಕೀರ್ಣವಾಗಿದ್ದು, ಸರ್ಕಾರಗಳ ಅಧಿಕೃತ ಅನುಮತಿ ಇಲ್ಲದೆ ನಡೆಯುವಂಥದ್ದಲ್ಲ. ನಿಮಗೆಲ್ಲಾ ತಿಳಿದಿರುವಂತೆ ಬಿಸಿಸಿಐ ಮತ್ತು ಪಿಸಿಬಿ ಪರಸ್ಪರ ಪಂದ್ಯಾವಳಿಗೆ ಸಮ್ಮತಿಸಿದರೂ, ಸರ್ಕಾರಗಳ ಮಟ್ಟದಲ್ಲಿ ಒಮ್ಮತ ಮೂಡಲಿಲ್ಲ. ಯಾವಾಗ ಉಭಯ ದೇಶಗಳ ಸರ್ಕಾರಗಳು ಸರಣಿಗೆ  ಹಸಿರು ನಿಶಾನೆ  ತೋರುವುವೋ ಆಗ ಪೂರ್ಣ ಪ್ರಮಾಣದ ಸರಣಿ ನಡೆಯಲಿದೆ''  ಎಂದು ಬಿಸಿಸಿಐನ  ಅಧಿಕೃತ ಫೇಸ್‍ಬುಕ್  ಪೇಜ್‍ನಲ್ಲಿ ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಗೆ ಶಶಾಂಕ್ ಉತ್ತರಿಸಿದರು. 

ಕ್ರೋವ್ ವೈಯಕ್ತಿಕ ನಿರ್ಧಾರ:
ಇನ್ನು ಬಹು ಚರ್ಚೆಗೆ ಒಳಗಾದ ಭಾರತ ಮತ್ತು ದ.ಆಫ್ರಿಕಾ  ನಡುವಣದ ನಾಗ್ಪುರ ಟೆಸ್ಟ್ ಪಂದ್ಯದ ಪಿಚ್ ಕುರಿತು ಐಸಿಸಿ ಪಂದ್ಯ ರೆಫರಿ ಜೆಫ್ ಕ್ರೋವ್  ತಮ್ಮ ವೈಯಕ್ತಿಕ ನಿರ್ಧಾರವನ್ನಷ್ಟೇ ತಳೆದಿದ್ದಾರೆ ಎಂದು ಹೇಳಿದರು. 

ಜನವರಿಯಲ್ಲೂ ಸರಣಿ ಅಸಾಧ್ಯ: ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನ ನಡುವಣ  ಸರಣಿಯ ಮೇಲಿನ ಆಸೆಯನ್ನು ಕೊನೆಗೂ ಕೈಬಿಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್, ಮುಂದಿನ ವರ್ಷ ಜನವರಿಯಲ್ಲೂ ಭಾರತ ಮತ್ತು ಪಾಕಿಸ್ತಾನ  ನಡುವಣ ಕ್ರಿಕೆಟ್ ಸರಣಿ ಅಸಾಧ್ಯ ಎಂದು ತಿಳಿಸಿದ್ದಾರೆ. 

ಲಾಹೋರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ನಡೆಸಲು ಇದ್ದ  ಅಮೂಲ್ಯ  ಸಮಯ ಕೈಜಾರಿ ಹೋಗಿದೆ. ಈಗ ನಾವು ಬಿಸಿಸಿಐ ತನ್ನ ಸರ್ಕಾರದಿಂದ ಅನುಮತಿ ಪಡೆದು ಸರಣಿಯನ್ನಾಡಲು ಸಿದ್ಧ ಎಂದು ಹೇಳುವವರೆಗೂ ಕಾಯಬೇಕಿದೆ. ಸರ್ಕಾರದಿಂದ ಅನುಮತಿ  ಸಿಕ್ಕರೆ ಸರಣಿ ಬಗ್ಗೆ ಯೋಚಿಸುತ್ತೇವೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.