ವಿಜಯ ತಂದ ವಿಲಿಯಮ್ಸ್ ಶತಕ
ಮೂರನೇ ಕ್ರಮಾಂಕದಲ್ಲಿಕದಲ್ಲಿ ಕೇನ್ ವಿಲಿಯಮ್ ಸನ್ (108: 164 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಅಜೇಯ ಶತಕದ ನೆರವಿನೊಂದಿಗೆ ಆತಿಥೇಯ ನ್ಯೂಜಿಲೆಂಡ್, 2-೦ ಅಂತರದಿಂದ ತನ್ನದಾಗಿಸಿಕೊಂಡಿತು.

ಹ್ಯಾಮಿಲ್ಟನ್: ಮೂರನೇ ಕ್ರಮಾಂಕದಲ್ಲಿಕದಲ್ಲಿ ಕೇನ್ ವಿಲಿಯಮ್ ಸನ್ (108: 164 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಅಜೇಯ ಶತಕದ ನೆರವಿನೊಂದಿಗೆ ಆತಿಥೇಯ ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‍ಗಳ ಗೆಲುವು ಸಾಧಿಸುವ ಮೂಲಕ 2 ಪಂದ್ಯ ಸರಣಿಯನ್ನು 2-೦ ಅಂತರದಿಂದ ತನ್ನದಾಗಿಸಿಕೊಂಡಿತು.
ಇಲ್ಲಿನ ಸೆಡಾನ್ ಪಾರ್ಕ್‍ನಲ್ಲಿ ಸೋಮವಾರ ಮುಕ್ತಾಯ ಕಂಡ ಪಂದ್ಯದಲ್ಲಿ ಗೆಲ್ಲಲು 189 ರನ್ ಗುರಿ ಪಡೆದಿದ್ದ ನ್ಯೂಜಿಲೆಂಡ್, ಭಾನುವಾರದಂದೇ 5 ವಿಕೆಟ್ ನಷ್ಟಕ್ಕೆ 142 ರನ್ ಮಾಡಿ ಜಯದ ಸುಳಿವು ನೀಡಿತ್ತು. 78 ರನ್ ಗಳಿಸಿ ಔಟಾಗದೆ ಉಳಿದಿದ್ದ ವಿಲಿಯಮïಸನ್ ಸೋಮವಾರ ಶತಕ ಪೂರೈಸಿದರೆ, ಯಾವುದೇ ರನ್ ಗಳಿಸದೆ ಕ್ರೀಸ್‍ನಲ್ಲಿದ್ದ ವಿಕೆಟ್ ಕೀಪರ್ ಬಿ.ಜೆ. ವಾಟ್ಲಿಂಗ್ 13 ರನ್ ಗಳಿಸಿ ಕೇನ್ ವಿಲಿಯಮ್ಸನ್ ಜತೆಗೆ ಅಜೇಯರಾಗುಳಿದರು.
ಆಕರ್ಷಕ ಶತಕ ಬಾರಿಸಿದ ಕೇನ್ ವಿಲಿಯಮ್ಸನ್ ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಕಳೆದ 13 ಟೆಸ್ಟ್ ಪಂದ್ಯಗಳಲ್ಲಿನ ತನ್ನ ಅಜೇಯ ಯಾತ್ರೆಮುಂದುವರೆಸಿದಂತಾಗಿದೆ.
ಸಂಕ್ಷಿಪ್ತ ಸ್ಕೋರ್ ವಿವರ: ಶ್ರೀಲಂಕಾ ಮೊದಲ ಇನ್ನಿಂಗ್ಸ್: 292, ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 237, ಶ್ರೀಲಂಕಾ ಎರಡನೇ ಇನ್ನಿಂಗ್ಸ್: 133, ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 54.3 ಓವರ್ ಗಳಲ್ಲಿ 189 (ಕೇನ್ ಅಜೇಯ 108, ಚಮೀರ 68ಕ್ಕೆ 4); ಫಲಿತಾಂಶ: ಕಿವೀಸ್‍ಗೆ 5 ವಿಕೆಟ್ ಜಯ.
ದಾಖಲೆ ಬರೆದ ಕೇನ್
ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್ ಕೇನ್ ವಿಲಿಯಮ್ಸನ್ (889 ರೇಟಿಂಗ್) ಬ್ಯಾಟ್ಸ್ ಮನ್‍ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಮೊಟ್ಟಮೊದಲ ಕಿವೀಸ್ ಬ್ಯಾಟ್ಸ್‍ಮನ್ ಎಂದೆನಿಸಿದ್ದಾರೆ. ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡದ ಎರಡನೇ ಇನಿಂಗ್ಸ್‍ನಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಕೇನ್ ವಿಲಿಯಮ್ಸನ್‍ಗೆ ಈ ಸಾಧನೆಯ ಗರಿ ಸಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


