ಸೆಹ್ವಾಗ್, ಗಂಗೂಲಿ ಕಾದಾಟಕ್ಕೆ ವೇದಿಕೆ ಸಜ್ಜು
ಭಾರತದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಮುಂದಿನ ವರ್ಷ ಜನವರಿ ಮಾಸಾಂತ್ಯದಲ್ಲಿ ಶುರುವಾಗಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಪಂದ್ಯಾವಳಿಯ...

ದುಬೈ: ಭಾರತದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಮುಂದಿನ ವರ್ಷ ಜನವರಿ ಮಾಸಾಂತ್ಯದಲ್ಲಿ ಶುರುವಾಗಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಪಂದ್ಯಾವಳಿಯಲ್ಲಿ
ವಿರುದ್ಧ ತಂಡಗಳಲ್ಲಿದ್ದು, ಪರಸ್ಪರ ಕಾದಾಟಕ್ಕೆ ಇಳಿಯಲು ಅಣಿಯಾಗಿದ್ದಾರೆ.
ಜನವರಿ 28ರಿಂದ ಶುರುವಾಗಲಿರುವ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಫಬ್ರವರಿ 13ರಂದು ಫೈನಲ್ ದುಬೈ ಇಂಟರ್‍ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅಂದಹಾಗೆ ಪಂದ್ಯಾವಳಿಯು ದುಬೈ ಮತ್ತು ಶಾಂಘೈ ನಗರಗಳಲ್ಲಿ ನಡೆಯಲಿವೆ. ಫಬ್ರವರಿ 11ರಂದು ದುಬೈನಲ್ಲಿ ಸೆಮಿಫೈ ನಲ್ ನಡೆಯಲಿದ್ದರೆ, ಇದೇ ಮೈದಾನದಲ್ಲಿ ಮರುದಿನ ಎರಡನೇ ಸೆಮಿಫೈನಲ್ ಪಂದ್ಯವು ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಟೂರ್ನಿಯ ಆರಂಭಿಕ ಪಂದ್ಯವು ಲಿಬ್ರಾ ಲೆಜೆಂಡ್ಸ್ ಹಾಗೂ ಜೆಮಿನಿ ಅರೇಬಿಯನ್ಸ್ ನಡುವೆ ನಡೆಯಲಿದ್ದು, ಗಂಗೂಲಿ, ಗ್ರೇಮ್ ಸ್ವಾನ್ ಮತ್ತು ಜಾಕ್ ಕಾಲಿಸ್‍ರಂಥವರು ಸೆಹ್ವಾಗ್, ಕುಮಾರ್ ಸಂಗಕ್ಕಾರ ಮತ್ತು ಮುತ್ತಯ್ಯ ಮುರಳೀಧರನ್ ವಿರುದ್ಧ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


