ಪಿಎಸ್ಎಲ್ ಹರಾಜು ಪ್ರಕ್ರಿಯೆ: ಗೇಲ್‍ಗೆ ಕೋಟಿ ಕೊಟ್ಟ ಲಾಹೋರ್
ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.

ಲಾಹೋರ್: ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.
ಲಾಹೋರ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಅವರನ್ನು ಪಾಕಿಸ್ತಾನ ರುಪಾಯಿ ಲೆಕ್ಕಾಚಾರದಂತೆ 1 ಕೋಟಿ 46 ಲಕ್ಷ ರು. ಮೊತ್ತಕ್ಕೆ ಲಾಹೋರ್ ಕ್ವಲ್ಯಾಂಡರ್ಸ್ ಕೊಂಡುಕೊಂಡರೆ, ಮೊದಲ ದಿನದ ಆಯ್ಕೆಯಲ್ಲಿ ಪಾಕಿಸ್ತಾನದ ಹಿರಿಯ ಅಟಗಾರ ಯೂನಿಸ್ ಖಾನ್ ಯಾರಿಗೂ ಬೇಡವಾದರು.ಇತರ ಅಗ್ರ ಅಂತಾರಾಷ್ಟ್ರೀಯ ಟಿ20 ಆಟಗಾರರಾದ ಕೆವಿನ್ ಪೀಟರ್ಸನ್, ಶೇನ್ ವ್ಯಾಟ್ಸನ್, ಶೋಯೆಬ್ ಮಲಿಕ್ ಅವರೂ ತಲಾ 1 ಕೋಟಿ 46 ಲಕ್ಷ ರು. ಮೊತ್ತಕ್ಕೆ ಕ್ರಮವಾಗಿ ಕ್ವೆಟ್ಟಾ ಗ್ಲಾಡಿಯೇಟರ್ಸ್, ಇಸ್ಲಾಮಾಬಾದ್ ಯುನೈಟೆಡ್, ಕರಾಚಿ ಕಿಂಗ್ಸ್, ಪೆಶಾವರ್ ಝಲ್ಮಿ ತಂಡಗಳಿಗೆ ಸೇರ್ಪಡೆಗೊಂಡಿದ್ದಾರೆ.
ಆಯ್ಕೆ ಹೇಗೆ?: ಟೂರ್ನಿಗಾಗಿ ಆರಂಭಗೊಂಡಿರುವ ಆಟಗಾರರ ಹರಾಜು ಪಟ್ಟಿಯಲ್ಲಿ ಒಟ್ಟು 308 ಆಟಗಾರರಿದ್ದು, ಇವರಲ್ಲಿ 137 ಪಾಕಿಸ್ತಾನೀಯರು. ಈ ಎಲ್ಲರನ್ನೂ ಅವರವರ ಅಂತಾರಾಷ್ಟ್ರೀಯ ಮಾನ್ಯತೆ ಆಧಾರದಲ್ಲಿ ಪ್ಲಾಟಿನಂ, ಡೈಮಂಡ್, ಗೋಲ್ಡ್, ಸಿಲ್ವರ್ ಹಾಗೂ ಎಮರ್ಜಿಂಗ್ ಎಂಬ ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ಲಾಟಿನಂ ವಿಭಾಗಕ್ಕೆ 1 ಕೋಟಿ 46 ಲಕ್ಷ (ಡಾಲರ್ ವಿರುದ್ಧದ ಪಾಕಿಸ್ತಾನ ರುಪಾಯಿ ದರದಂತೆ) ನಿಗದಿಗೊಳಿಸಲಾಗಿದ್ದು ಈ ವಿಭಾಗದಿಂದ ಆಯ್ಕೆಯಾಗುವ ಎಲ್ಲಾ ಆಟಗಾರರೂ ಅದೇ ಮೊತ್ತಕ್ಕೆ ಹರಾಜಾಗಲಿದ್ದಾರೆ.ಡೈಮಂಡ್‍ಗೆ ರೂ. 73 ಲಕ್ಷ, ಗೋಲ್ಡ್‍ಗೆ 52 ಲಕ್ಷ, ಸಿಲ್ವರ್ ವಿಭಾಗದ ಆಟಗಾರರಿಗೆ 26 ಲಕ್ಷ, ಎಮರ್ಜಿಂಗ್ ಆಟಗಾರರಿಗೆ 10 ಲಕ್ಷ ರು. ನಿಗದಿಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


