ಕ್ರೀಡೆ

ವಿಲಿಯಮ್ಸನ್ ಆಸರೆ; ಜಯದ ಹೊಸ್ತಿಲಲ್ಲಿ ಮೆಕಲಂ ಪಡೆ

ವೇಗಿಗಳಾದ ಟಿಮ್ ಸೌಥೀ ಹಾಗೂ ವ್ಯಾಂಗರ್ ಆಕ್ರಮಣ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕೇನ್ ವಿಲಿಯಮ್ಸನ್‍ರವರ ಸಮಯೋಚಿತ ಬ್ಯಾಟಿಂಗ್‍ನ...

ವಿಲಿಯಮ್ಸನ್ ಆಸರೆ; ಜಯದ ಹೊಸ್ತಿಲಲ್ಲಿ ಮೆಕಲಂ ಪಡೆ
ಕೇನ್ ವಿಲಿಯಮ್ಸನ್‍
Published On :

ಹ್ಯಾಮಿಲ್ಟನ್: ವೇಗಿಗಳಾದ ಟಿಮ್ ಸೌಥೀ ಹಾಗೂ ವ್ಯಾಂಗರ್ ಆಕ್ರಮಣ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕೇನ್ ವಿಲಿಯಮ್ಸನ್‍ರವರ ಸಮಯೋಚಿತ ಬ್ಯಾಟಿಂಗ್‍ನ ನೆರವಿನಿಂದಾಗಿ ಆತಿಥೇಯ ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲವಿನ ಹೊಸ್ತಿಲಲ್ಲಿ ಬಂದು ನಿಂತಿದೆ.

ಪಂದ್ಯವನ್ನು ಗೆಲ್ಲಲು ಕಿವೀಸ್‍ಗೆ ಇನ್ನೂ 45 ರನ್ ಬಾಕಿಯಿದ್ದು, ಇನ್ನೂ ಎರಡು ದಿನ ಅವಕಾಶವಿದೆ. ಪಂದ್ಯದ ಎರಡ ನೇ ದಿನವಾದ ಶನಿವಾರ ತನ್ನ ಮೊ ದಲಇನಿಂಗ್ಸ್ ನಲ್ಲಿ 9 ವಿಕೆಟ್‍ಗೆ 232 ರನ್ ಗಳಿಸಿದ್ದ ನ್ಯೂಜಿಲೆಂಡ್, ಮೂರನೇ ದಿನ ತನ್ನ ಆಟ ಮುಂದುವರಿಸಿತು . ಶನಿವಾರ ದಿನಾಂತ್ಯದ ಮೊತ್ತಕ್ಕೆ ಕೇವಲ5 ರನ್ ಸೇರಿಸುವಷ್ಟರಲ್ಲಿ ಕೊನೆಯ ವಿಕೆಟ್ ರೂಪದಲ್ಲಿ ಬೌಲ್ಟ್ ಅವರನ್ನು ಕಳೆದುಕೊಂಡ ನ್ಯೂಜಿಲೆಂಡ್, ತನ್ನ ಮೊದಲ ಇನಿಂಗ್ಸ್ ಅನ್ನು 237 ರನ್ ಗೆ  ಮುಕ್ತಾಯಗೊಳಿಸಿತು.

ಶ್ರೀಲಂಕಾ ತಲ್ಲಣ: ಆದರೆ, ತದನಂತರ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ, ಕೇವಲ 133 ರನ್ ಗಳಿಗೆ ಆಲೌಟ್ ಆಗಿದ್ದು ದಿನದ ಅಚ್ಚರಿಗಳಲ್ಲೊಂದು. ವೇಗಿಗಳಾದ ಟಿಮ್ ಸೌಥೀ,  ವ್ಯಾಂಗರ್ ಹಾಗೂ ಬ್ರಾಸ್ ವಲ್ ದಾಳಿಗೆ ತತ್ತರಿಸಿತು . ಆರಂಭಿಕ ಕುಶಬ್ ಮೆಂಡಿಸ್ 40 ರನ್ ಗಡಿ ದಾಟಿದ್ದು ಹಾಗೂ ಮತ್ತೊಬ್ಬ ಆರಂಭಿಕ ಕರುಣಾರತ್ನೆ ಹಾಗೂ ಮಧ್ಯಮ ಕ್ರಮಾಂಕದ ಸಿರಿವರ್ಧನ 26 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕೆಲ್ಲಾ ಬ್ಯಾಟ್ಸ್‍ಮನ್‍ಗಳು 10 ರನ್ ಗಡಿಯನ್ನೂ ಮುಟ್ಟಲಿಲ್ಲ. ದಿನೇಶ್ ಚಂಡೀಮಲ್, ಏಂಜೆಲೊ ಮ್ಯಾಥ್ಯೂಸ್, ಚಮೀರಾ, ಲಕ್ಮರ್ ಒಂದಂಕಿ ರನ್ ಗಳಿಸಿದರೆ, ಜಯಸುಂದೆರಾ, ರಂಗನಾ ಹೆರಾತ್ ಅವರದ್ದಂತೂ ಶೂನ್ಯ ಕಾಣಿಕೆ. ಹೀಗೆ, ಲಂಕಾ ದಂಡು ತತ್ತರಿಸುವಂತೆ ಮಾಡಿದ ಸೌಥೀ 4 ವಿಕೆಟ್ ಗಳಿಸಿದರೆ ವ್ಯಾಂಗರ್ 3 ಹಾಗೂ ಬ್ರಾಸ್‍ವೆಲ್ 2 ವಿಕೆಟ್ ಗಳಿಸಿದರು.

ಕಿವೀಸ್‍ಗೂ ಆರಂಭಿಕ ಸಂಕಷ್ಟ: ಅತ್ತ, ಶ್ರೀಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ, ಪಂದ್ಯ ಗೆಲ್ಲಲು ಕೇವಲ 189 ರನ್ ಗುರಿಯೊಂದಿಗೆ ತನ್ನ ದ್ವಿತೀಯ ಇನಿಂಗ್ಸ್ ಆರಂ ಭಿಸಿದ ಕಿವೀಸ್ ತಂಡವ ಸಂಕಷ್ಟಕ್ಕೊಳಗಾಯಿತು. ಕೇವಲ 11 ರನ್ ಮೊತ್ತಕ್ಕೇ ಆರಂಭಿಕರಾದ ಲಾಥಮ್, ಗುಪ್ಟಿಲ್ ಅವರನ್ನು ಕಳೆದುಕೊಂಡ ಕಿವೀಸ್‍ಗೆ ಮೂರನೇ ಕ್ರಮಾಂಕದ ಕೇನ್  ವಿಲಿಯಮ್ಸನ್ ನೆರವಾದರು. ದಿನಾಂತ್ಯದ ಹೊತ್ತಿಗೆ, ಔಟಾಗದೇ ಉಳಿದಿರುವ ಅವರು 78 ರನ್ ಗಳಿಸಿದ್ದು ಖಾತೆ ತೆರಯದೇ ಇರುವ ವ್ಯಾಟ್ಲಿಂಗ್ ಜತೆ, ಪಂದ್ಯದ ನಾಲ್ಕನೇ ದಿನವಾದ  ಸೋಮವಾರ ಇನಿಂಗ್ಸ್ ಮುಂದುವರಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 292 ಮತ್ತು ಎರಡನೇ ಇನಿಂಗ್ಸ್ 133 (ಮೆಂಡಿಸ್ 46, ಸಿರಿವರ್ಧನ 26; ಸೌಥೀ 26ಕ್ಕೆ 4, ವ್ಯಾಂಗರ್ 40ಕ್ಕೆ 3); ನ್ಯೂಜಿಲೆಂಡ್ 237 ಮತ್ತು ಎರಡನೇ  ಇನಿಂಗ್ಸ್ 142 (42 ಓವರ್‍ಗಳಲ್ಲಿ) (ಕೇನ್ ವಿಲಿಯಮ್ಸನ್ ಔಟಾಗದೇ 78, ಟೇಲರ್ 35; ಚಮೀರಾ 45ಕ್ಕೆ 4, ಲಕ್ಮಲ್ 19ಕ್ಕೆ 1).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.