ಕ್ರೀಡೆ

ಶೂಟಿಂಗ್: ಡೇರಿಯಸ್‍ಗೆ ಚಿನ್ನ

ಭಾರತೀಯ ರೈಫಲ್ಸ್ ಸಂಸ್ಥೆ (ಎನ್‍ಆರ್‍ಎಐ)ಯ ಕಾರ್ಯದರ್ಶಿಯೂ ಆಗಿರುವ ಶೂಟರ್ ಡೇರಿಯಸ್ ಚಿನಾಯ್, 59ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...

ಶೂಟಿಂಗ್: ಡೇರಿಯಸ್‍ಗೆ ಚಿನ್ನ
ಸಂಗ್ರಹ ಚಿತ್ರ
Published On :

ಜೈಪುರ: ಭಾರತೀಯ ರೈಫಲ್ಸ್ ಸಂಸ್ಥೆ (ಎನ್‍ಆರ್‍ಎಐ)ಯ ಕಾರ್ಯದರ್ಶಿಯೂ ಆಗಿರುವ ಶೂಟರ್ ಡೇರಿಯಸ್ ಚಿನಾಯ್, 59ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ  ಗೆದ್ದಿದ್ದಾರೆ.

ಪುರುಷರ ವಿಭಾಗದ ಟ್ರಾಪ್ ಶೂಟಿಂಗ್‍ನ ಫೈನಲ್‍ನಲ್ಲಿ ತೆಲಂಗಾಣ ಪರ ಕಣಕ್ಕಿಳಿದಿದ್ದ ಚಿನಾಯ್ ಮೊದಲಿಗರಾಗಿ ಹೊರಹೊಮ್ಮಿದರೆ, ಎನ್‍ಆರ್‍ಎಐನ ಅಧ್ಯಕ್ಷ ರಾಣಿಂದರ್ ಸಿಂಗ್ ಹಾಗೂ  ವಿಶ್ವದ ಮಾಜಿ ಟ್ರಾಪ್ ಚಾಂಪಿಯನ್ ಮಾನವ್ಜೀತ್ ಸಿಂಗ್ ಸಂಧು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಗೌರವಕ್ಕೆ ಭಾಜನರಾದರು. ತಂಡಗಳ ವಿಭಾಗದ ಪುರುಷರ ಟ್ರಾಪ್ ವಿಭಾಗದಲ್ಲಿ  ಮಾನವ್ಜೀತ್, ಮಾನ್ಶರ್ ಸಿಂಗ್, ವಿಶ್ವದೇವ್ ಸಿಂಗ್ ಸಿಂಧು ಅವರುಳ್ಳ ಪಂಜಾಬ್ ತಂಡ ಚಿನ್ನ ಗೆದ್ದರೆ, ಡೇರಿಯಸ್ ಇದ್ದ ತೆಲಂಗಾಣ ದ್ವಿತೀಯ ಹಾಗೂ ಉತ್ತರ ಪ್ರದೇಶ ತಂಡ ತೃತೀಯ ಸ್ಥಾನ  ಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.