ಕ್ರೀಡೆ

ವಿಜೇಂದರ್ ಹ್ಯಾಟ್ರಿಕ್ ಸಾಧನೆ

ವೃತ್ತಿಪರ ಬಾಕ್ಸಿಂಗ್‍ನಲ್ಲಿ ತಮ್ಮದೇ ಆದ ಹವಾ ಸೃಷ್ಠಿಸುತ್ತಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ...

ವಿಜೇಂದರ್ ಹ್ಯಾಟ್ರಿಕ್ ಸಾಧನೆ
ವಿಜೇಂದ್ರರ್ ಸಿಂಗ್
Published On :

ಮ್ಯಾಂಚೆಸ್ಟರ್: ವೃತ್ತಿಪರ ಬಾಕ್ಸಿಂಗ್‍ನಲ್ಲಿ ತಮ್ಮದೇ ಆದ ಹವಾ ಸೃಷ್ಠಿಸುತ್ತಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಜೇಂದರ್ ಸಿಂಗ್, ಬಲ್ಗೇರಿಯಾದ ಸಮೆಟ್ ಹ್ಯೂಸೆನೊವ್ ಅವರ ವಿರುದ್ಧ ಎರಡು ಸುತ್ತಿನ ಒಳಗೆ ಟೆಕ್ನಿಕಲ್ ನಾಕೊಟ್ ಮೂಲಕ ಜಯ ಸಾಧಿಸಿದರು. ವಿಜೇಂದರ್ ಆಕ್ರಮಣಕಾರಿ ಪ್ರದರ್ಶನದ ಮುಂದೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಸಮೆಟ್, ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ನೆತರ ಎರಡನೇ ಸುತ್ತಿನಲ್ಲಿ ಕೆವಲ 35 ಸೆಕೆಂಡ್ ಆಗುವಷ್ಟರಲ್ಲೇ ಸೋಲನುಭವಿಸಿದರು. ಸಮೆಟ್ ಈ ಹಿಂದೆ 14 ಪಂದ್ಯಗಳನ್ನಾಡಿದ್ದ ಪರಿಣಾಮ ವಿಜೇಂದರ್‍ಗೆ ಇವರು ಅನುಭವಿ ಎದುರಾಳಿಯಾಗಿ ಪರಿಣಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.