ಧರ್ಮಶಾಲಾಕ್ಕೆ ಉತ್ಕೃಷ್ಟ ಕೇಂದ್ರ
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್ಪಿಸಿಎ)ಯ ಶೋ ಪೀಸ್ ಎಂದೇ ಖ್ಯಾತವಾಗಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ತನ್ನ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವುದಾಗಿ ಏಷ್ಯನ್...

ಶಿಮ್ಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್ಪಿಸಿಎ)ಯ ಶೋ ಪೀಸ್ ಎಂದೇ ಖ್ಯಾತವಾಗಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ತನ್ನ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಘೋಷಿಸಿದೆ.
ಅಲ್ಲದೆ, ಭಾರತದ ಮೌಲ್ಯಯುತ ಕ್ರೀಡಾಂಗಣವೆಂಬ ಮೆಚ್ಚುಗೆಯನ್ನೂ ಅದು ಸೂಚಿಸಿದೆ. ಉತ್ಕೃಷ್ಟ ಕೇಂದ್ರ ಮಂಜೂರಾದ ಹಿನ್ನೆಲೆಯಲ್ಲಿ, ಕ್ರೀಡಾಂಗಣಕ್ಕೆ ಒಳಾಂಗಣ ಹಾಗೂ ಹೊರಾಂಗಣ ತರಬೇತಿ ಕೇಂದ್ರಗಳು ಲಭ್ಯವಾಗಲಿವೆ. ತರಬೇತುದಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ನೂತನ ತರಬೇತಿ ಉಪಕರಣಗಳು ಸಿಗಲಿವೆ. ಏಷ್ಯಾ ಉಪಖಂಡದಲ್ಲಿ ಧರ್ಮಶಾಲಾ ಉತ್ಕೃಷ್ಟ ಕೇಂದ್ರ ಒಂದು ಸಮರ್ಥ ತರಬೇತಿ ಕೇಂದ್ರವಾಗಿ ಬೆಳೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


