ಫೈನಲ್‍ಗೆ ಚೆನ್ನೈಯಿನ್
ತವರಿನ ಅಂಗಣದಲ್ಲಿ ನಡೆದ ಅಂತಿಮ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ, ಎರಡೂ ಸೆಮಿಫೈನಲ್ ಪಂದ್ಯಗಳ ಸರಾಸರಿ ಗೋಲಿನ ಆಧಾರದ ಮೇಲೆ ಚೆನ್ನೈಯಿನ್ ಎಫ್ ಸಿ...

ಕೋಲ್ಕತಾ: ತವರಿನ ಅಂಗಣದಲ್ಲಿ ನಡೆದ ಅಂತಿಮ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಸೋತರೂ, ಎರಡೂ ಸೆಮಿಫೈನಲ್ ಪಂದ್ಯಗಳ ಸರಾಸರಿ ಗೋಲಿನ ಆಧಾರದ ಮೇಲೆ ಚೆನ್ನೈಯಿನ್ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಫೈನಲ್‍ಗೆ ಪ್ರವೇಶಿಸಿತು.
ಬುಧವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮೊದಲ ಹಂತದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ 3-0 ಅಂತರದಿಂದ ಜಯಿಸಿತ್ತು. ಎರಡೂ ಪಂದ್ಯಗಳ ಗೋಲಿನ ಸರಾಸರಿಯಿಂದ ಚೆನ್ನೈಯಿನ್ ಎಫ್ ಸಿ 4-2 ಮುನ್ನಡೆ ಸಾಧಿಸಿದ ಪರಿಣಾಮ ಹಾಲಿ ಚಾಂಪಿಯನ್ನರು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು.
ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ಪರ ಲೆಕಿಕ್ 22ನೇ ಮತ್ತು ಹ್ಯೂಮೆ 87ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಚೆನ್ನೈಯಿನ್ ಎಫ್ ಸಿ ಪರ ಫಿಕ್ರು 90ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮೊದಲ ಹಂತದ ಪಂದ್ಯದಲ್ಲಿ ಕೊಲ್ಕತಾ ತಂಡ 0-3 ಅಂತರದ ಸೋಲಿನಿಂದ ತೀವ್ರ ಹಿನ್ನಡೆ ಸಾಧಿಸಿತ್ತು. ಹಾಗಾಗಿ ಫೈನಲ್ ಪ್ರವೇಶಿಸಲು ಅರ್ಹತೆ ಪಡೆಯಬೇಕಾದರೆ, ಹಾಲಿ ಚಾಂಪಿಯನ್ ಕೋಲ್ಕತಾ ಈ ಪಂದ್ಯದಲ್ಲಿ ಕನಿಷ್ಠ 4 ಗೋಲಿನ ಅಂತರದಲ್ಲಿ ಜಯಿಸಬೇಕಿತ್ತು. ಆದರೆ ಕೋಲ್ಕತಾ ಕೇವಲ 1 ಗೋಲಿನ ಅಂತರದಲ್ಲಿ ಮಾತ್ರ ಜಯಿಸಲು ಶಕ್ತವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


