ವಿಜಯ್ ಹಜಾರೆ ಟ್ರೋಫಿ: ಮಿಂಚಿದ ಯುವಿ, ಮಂಕಾದ ಧೋನಿ
ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನದ ಆಟದಲ್ಲಿ ಯುವರಾಜ್ ಸಿಂಗ್ ಮಿಂಚಿದ್ದಾರೆ. ಆ ಪಂದ್ಯದಲ್ಲಿ 93ರನ್ಗಳನ್ನು ಗಳಿಸಿದ ಯುವಿ ಶತಕ ವಂಚಿತರಾದರು...

Published On :
ಆಲೂರು (ಕರ್ನಾಟಕ): ಡಿ. 10 ಗುರುವಾರದಂದು ನಡೆದ ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನದ ಆಟದಲ್ಲಿ ಯುವರಾಜ್ ಸಿಂಗ್ ಮಿಂಚಿದ್ದಾರೆ. ಆ ಪಂದ್ಯದಲ್ಲಿ 93ರನ್ಗಳನ್ನು ಗಳಿಸಿದ ಯುವಿ ಶತಕ ವಂಚಿತರಾದರು. ಅದೇ ವೇಳೆ ಏಳು ವರುಷಗಳ ನಂತರ ಪ್ರಾದೇಶಿಕ ಕ್ರಿಕೆಟ್ಗೆ ಮರಳಿದ ಮಹೇಂದ್ರ ಸಿಂಗ್ ಧೋನಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಜಾರ್ಖಂಡ್ ಮತ್ತು ಜಮ್ಮು ನಡುವೆ ನಡೆದ ಪಂದ್ಯದಲ್ಲಿ ಜಾರ್ಖಂಡ್ ಟೀಂ ಪರವಾಗಿ ಆಡಿದ ಧೋನಿಗೆ ಕೇವಲ 9 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಮೂರು ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದ್ದ ಹೊತ್ತಲ್ಲಿ ಯುವರಾಜ್ ಕ್ರೀಸ್ಗಿಳಿದಿದ್ದರು. ಮುಂಬೈ ಬೌಲರ್ಗಳನ್ನು ಜಾಣತನದಿಂದ ಎದುರಿಸಿದ ಯುವರಾಜ್, ಮನ್ ದೀಪ್ ಸಿಂಗ್ (41) ಜತೆಯಾಟದಲ್ಲಿ 97ರನ್ ಪೇರಿಸಿದ್ದು, ಗುರುಕೀರತ್ ಸಿಂಗ್ (20) ಜತೆಯಾಟದಲ್ಲಿ 48 ರನ್ ಬಾರಿಸಿ ಪಂಜಾಬ್ ತಂಡದ ಸ್ಕೋರ್ ಏರಿಸಿದರು.
6 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸುವ ಮೂಲಕ ಯುವರಾಜ್ ಸಿಂಗ್ 97 ರನ್ ಗಳಿಸುವಲ್ಲಿ ಸಫಲರಾದರು. ಆದರೆ ಯುವರಾಜ್ ಸಿಂಗ್ರ ಈ ಪ್ರದರ್ಶನ ಪಂಜಾಬ್ ಟೀಂನ್ನು ಗೆಲುವಿನತ್ತ ಕೊಂಡೊಯ್ಯಲಿಲ್ಲ. ಪಂಜಾಬ್ ಮುಂದಿಟ್ಟ 255 ರನ್ಗಳ ಗುರಿಯನ್ನು ಮಹಾರಾಷ್ಟ್ರ ಟೀಂ 45.1 ನೇ ಓವರ್ನಲ್ಲಿ ಸಾಧಿಸಿ ಗೆಲುವಿನ ನಗೆ ಬೀರಿತು.
ಮಹಾರಾಷ್ಟ್ರ ಪರವಾಗಿ ಜೇ ಬ್ಲಿಸ್ (92) ಅಭಿಷೇಕ್ ನಾಯರ್ (44 ಅಜೇಯ), ಶಶಾಂಕ್ ಸಿಂಗ್ (39), ಸೂರ್ಯ ಕುಮಾರ್ ಯಾದವ್ (32) ಮೊದಲಾದವರ ಅದ್ಭುತ ಪ್ರದರ್ಶನ ಮಹಾರಾಷ್ಟ್ರ ಟೀಂನ ಗೆಲುವಿಗೆ ಕಾರಣವಾಯಿತು.
ಏತನ್ಮಧ್ಯೆ, ಜಾರ್ಖಂಡ್ ಪರ ಆಡಿದ ಧೋನಿ ಉತ್ತಮ ಪ್ರದರ್ಶನ ನೀಡದಿದ್ದರೂ, ಜಾರ್ಖಂಡ್ ಟೀಂ ಜಮ್ಮು ವಿರುದ್ಧ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 210 ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಜಮ್ಮು ಟೀಂಗೆ 205 ರನ್ ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Jharkhandಮಹೇಂದ್ರ ಸಿಂಗ್ ಧೋನಿMahendra Singh DhoniJammu and KashmirYuvraj Singhಯುವರಾಜ್ ಸಿಂಗ್Vijay Hazare Trophyವಿಜಯ್ ಹಜಾರೆ ಟ್ರೋಫಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


