ಎಂಸಿಸಿ: ಜಯವರ್ಧನೆಗೆ ಆಜೀವ ಸದಸ್ಯತ್ವ
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರಿಗೆ ಮೆರ್ಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ಲಭ್ಯವಾಗಿದೆ..

ನವದೆಹಲಿ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರಿಗೆ ಮೆರ್ಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಆಜೀವ ಸದಸ್ಯತ್ವ ಲಭ್ಯವಾಗಿದೆ.
ಈ ಗೌರವ ಪಡೆದಿರುವ ಲಂಕಾದ 14ನೇ ಆಟಗಾರನಾಗಿ ಜಯವರ್ಧನೆ ಹೊರಹೊಮ್ಮಿದ್ದಾರೆ. ಈ ಬಗ್ಗೆ ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಂಸಿಸಿ, 149 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, ಸರಾಸರಿ 49.84ರ ಆಧಾರದಲ್ಲಿ ಒಟ್ಟು 11,814 ರನ್ ಪೇರಿಸಿ ವಿಶ್ವದ ಪ್ರಮುಖ ಬ್ಯಾಟ್ಸ್ ಮನ್‍ಗಳಲ್ಲಿ ಒಬ್ಬರಾಗಿದ್ದಾರೆ. ಮಹಾನ್ ಸಾಧನೆಗೈದಿರುವ ಜಯವರ್ಧನೆ ಅವರಿಗೆ ಗೌರವಯುತವಾಗಿ ಆಜೀವ ಸದಸ್ಯತ್ವ ನೀಡಲಾಗಿದೆ ಎಂದು ಎಂಸಿಸಿ ತನ್ನ ನಡೆಯನ್ನು ಸಮರ್ಥಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


