ಧೋನಿ, ರವಿಚಂದ್ರನ್ ಅಶ್ವಿನ್ ಗೆ ಹೆಚ್ಚಿದ ಬೇಡಿಕೆ
ಅಮಾನತು ಶಿಕ್ಷೆಯಲ್ಲಿರುವ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ತಂಡಗಳ ಆಟಗಾರರ ಮರು ಹರಾಜು ಪ್ರಕ್ರಿಯೆ ಫೆಬ್ರವರಿ 6ರಂದು ನಡೆಯಲಿದ್ದು...

ನವದೆಹಲಿ: ಅಮಾನತು ಶಿಕ್ಷೆಯಲ್ಲಿರುವ ಐಪಿಎಲ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ತಂಡಗಳ ಆಟಗಾರರ ಮರು ಹರಾಜು ಪ್ರಕ್ರಿಯೆ ಫೆಬ್ರವರಿ 6ರಂದು ನಡೆಯಲಿದ್ದು, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಭಾರೀ ಬೇಡಿಕೆ ಸಿಗಲಿದೆ ಎಂದು ಡಿಎನ್‍ಎ ವರದಿ ಮಾಡಿದೆ.
ಸಿಎಸ್‍ಕೆ, ಆರ್‍ಆರ್ ತಂಡಗಳಿಂದ ತಲಾ ಐವರು ಆಟಗಾರರಿಗಾಗಿ ಪ್ರತ್ಯೇಕ ಕರಡು ಪಟ್ಟಿ ಡಿ. 15ರೊಳಗೆ ಸಿದ್ಧವಾಗಲಿದೆ. ಇವರಲ್ಲಿ ಅಗ್ರ ಅಂತಾರಾಷ್ಟ್ರೀಯ ಆಟಗಾರನಿಗೆ ರು. 12.5 ಕೋಟಿ ಮೊತ್ತ ಸಿಗಲಿದೆ. ಇನ್ನುಳಿದ ನಾಲ್ವರು ಅಂತಾರಾಷ್ಟ್ರೀಯ ಆಟಗಾರರಿಗೆ ಕ್ರಮವಾಗಿ, ರು. 9.5 ಕೋಟಿ, ರು. 7.5 ಕೋಟಿ, ರು. 5.5 ಕೋಟಿ ಹಾಗೂ ರು. 4 ಕೋಟಿ ಸಿಗಲಿದೆ. ಇನ್ನುಳಿದಂತೆ, ಒಮ್ಮೆಯೂ ಐಪಿಎಲ್ ಆಡದ ಆಟಗಾರರಿಗೆ ಮೂಲ ಬೆಲೆ ರು. 4 ಕೋಟಿ ನಿಗದಿಪಡಿಸಲಾಗಿದೆ. ರಾಜ್ಯದ ಕರುಣ್ ನಾಯರ್‍ಗೆ ಮೂಲಬೆಲೆ ರು. 4 ಕೋಟಿ ಸಿಗಬಹುದು.
ಭಾರೀ ಬೇಡಿಕೆ: ಟೀಂ ಇಂಡಿಯಾ, ಸಿಎಸ್‍ಕೆ ನಾಯಕನಾಗಿ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ, ಆಲ್ರೌಂಡರ್ ಆಗಿ ಬೆಳೆದಿರುವ ಅಶ್ವಿನ್ ಅವರು ಪುಣೆ ಹಾಗೂ ರಾಜ್ ಕೋಟ್ ತಂಡಗಳ ಪ್ರಮುಖ ಆಯ್ಕೆ ಎನ್ನಲಾಗಿದೆ. ಕರಡು ಪಟ್ಟಿಯಲ್ಲಿನ ಆಟಗಾರರನ್ನು ಮೊದಲು ಆಯ್ಕೆ ಮಾಡುವ ಅವಕಾಶ ಪುಣೆ ತಂಡಕ್ಕೆ ಸಿಗಲಿದೆ. ಅತಿ ಕಡಿಮೆ ಮೊತ್ತಕ್ಕೆ ಫ್ರಾಂಚೈಸಿ ಖರೀದಿಸಿರುವುದೇ ಅದಕ್ಕೆ ಕಾರಣ. ಕನಿಷ್ಠ ಮೂಲ ಬೆಲೆ ರು. 10 ಕೋಟಿಗೆ ಕರಡು ಪ್ರತಿಯ ಆಟಗಾರರಿಗೆ ಅದು ಬಿಡ್ ಮಾಡಬಹುದಾಗಿದೆ. ರಾಜ್ ಕೋಟ್, ಕನಿಷ್ಠ ಬೆಲೆ ರು. 16 ಕೋಟಿಗೆ ಬಿಡ್ ಮಾಡಬಹುದು.
ಈ ಹಿನ್ನೆಲೆಯಲ್ಲಿ, ಸಿಎಸ್‍ಕೆ, ಆರ್‍ಆರ್ ತಂಡಗಳ ಆಟಗಾರರಲ್ಲಿ ಭಾರೀ ಬೇಡಿಕೆ ಯುಳ್ಳ ಅಗ್ರ 10 ಆಟಗಾರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ, ರವಿಚಂದ್ರನ್ ಅಶ್ವಿನ್, ಸ್ವೀವನ್ ಸ್ಮಿತ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ರವೀಂದ್ರ ಜಡೇಜಾ, ಬ್ರೆಂಡಾನ್ ಮೆಕಲಂ, ಸುರೇಶ್ ರೈನಾ, ಜೇಮ್ಸ್ ಫಾಕ್ನರ್, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


