ಕ್ರೀಡೆ

ಸೆಮಿಫೈನಲ್‍ನಲ್ಲಿ ಸೋತ ಮೇರಿ

ಐದು ಬಾರಿ ವಿಶ್ವ ಚಾಂಪಿಯನ್ ಹಿರಿಮೆ ಹೊಂದಿರುವ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ನ ಒಲಿಂಪಿಕ್ಸ್ ಪರೀಕ್ಷಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ...

ಸೆಮಿಫೈನಲ್‍ನಲ್ಲಿ ಸೋತ ಮೇರಿ
ಮೇರಿ ಕೋಮ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಐದು ಬಾರಿ ವಿಶ್ವ ಚಾಂಪಿಯನ್ ಹಿರಿಮೆ ಹೊಂದಿರುವ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ನ ಒಲಿಂಪಿಕ್ಸ್ ಪರೀಕ್ಷಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚಿನ  ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ರಿಯೋ ಡಿ ಜುನೈರೋನಲ್ಲಿ ಶನಿವಾರ ರಾತ್ರಿ ನಡೆದ ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ, ಅಮೆರಿಕದ ವರ್ಜೀನಿಯಾ ಫುಕ್ಸ್ ವಿರುದ್ಧ  ಸೋಲು ಕಂಡರು. ಒಂದು ವರ್ಷ ದೀರ್ಘ ವಿಶ್ರಾಂತಿಯ ಬಳಿಕ ಮೇರಿಯವರು ಪಾಲ್ಗೊಂಡಿದ್ದ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ ಇದಾಗಿತ್ತು. ಕಳೆದ ವರ್ಷ ಇಂಚಿಯಾನ್‍ನಲ್ಲಿ ನಡೆದಿದ್ದ  ಏಷ್ಯನ್ ಕ್ರೀಡಾಕೂಟದ ಬಳಿಕ ಭುಜದ ಶಸ್ತ್ರಚಿಕಿತ್ಸೆಯಿಂದಾಗಿ ವಿಶ್ರಾಂತಿಯಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.