ಧ್ರುವ್ ಮತ್ತೆ ಚಾಂಪಿಯನ್
ಪಂದ್ಯಾವಳಿಯ ಆರಂಭದಿಂದಲೂ ಮೇಲ್ಪಂಕ್ತಿ ಯಲ್ಲಿದ್ದ ಮಾಜಿ ರಾಷ್ಟ್ರೀಯ ಚಾಂಪಿಯನ್ ಶಬ್ಬೀರ್ ಧನ್ಕೋಟ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿದ ಹಾಲಿ...

Published On :
ಬೆಂಗಳೂರು: ಪಂದ್ಯಾವಳಿಯ ಆರಂಭದಿಂದಲೂ ಮೇಲ್ಪಂಕ್ತಿ ಯಲ್ಲಿದ್ದ ಮಾಜಿ ರಾಷ್ಟ್ರೀಯ ಚಾಂಪಿಯನ್ ಶಬ್ಬೀರ್ ಧನ್ಕೋಟ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿದ ಹಾಲಿ ಚಾಂಪಿಯನ್ ಆಗಿದ್ದ ಧ್ರುವ್ ಸರ್ದಾ, ಶನಿವಾರ ಮುಕ್ತಾಯಗೊಂಡ `ದ ಆ್ಯಕ್ಸಿಡೆಂಟ್ ರಿಲೀಫ್ ಕೇರ್ 26ನೇ ರಾಷ್ಟ್ರೀಯ ಟೆನ್‍ಪಿನ್ ಚಾಂಪಿಯನ್‍ಶಿಪ್ 'ನಲ್ಲಿ ಪುನಃ ಚಾಂಪಿಯನ್ ಎನಿಸಿದರು.
ಇನ್ನು ಮಹಿಳೆಯರ ವಿಭಾಗದ ಅಂತಿಮ ಸುತ್ತಿನಲ್ಲಿ ಅನುಕೃತಿ ಬಿಶ್ನೋಯ್ ಅವರನ್ನು ಮಣಿಸಿದ ತಮಿಳುನಾಡಿನ ಸಬೀನಾ ಅತಿಕಾ ಸತತ ಮೂರನೇ ಬಾರಿಗೆ ಚಾಂಪಿಯನ್ ಆದರು. ಈ ಮೂಲಕ, ರಾಷ್ಟ್ರೀಯ ಟೂರ್ನಿ ಯಲ್ಲಿ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಗೆ ಭಾಜನರಾದರು. ಇದು ಅವರ 9ನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.ಇನ್ನು, ಪುರುಷರ ವಿಭಾಗದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಮೆಟ್ಟಿ ಉತ್ತಮ ಪ್ರದರ್ಶನ ನೀಡಿದ ರಾಜ್ಯದ ಆಕಾಶ್ ಅಶೋಕ್ ಕುಮಾರ್ 3ನೇ ಸ್ಥಾನ ಪಡೆದರು.
ಶಬ್ಬೀರ್‍ಗೆ ಕೂದಲೆಳೆಯ ಸೋಲು : ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಧ್ರುವ ಹಾಗೂ ಶಬ್ಬೀರ್ ಅವರ ಸೆಣಸು ಕುತೂಹಲಕಾರಿ ಯಾಗಿತ್ತು. ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊಂದಿರುವ ಶಬ್ಬೀರ್‍ಗೆ ಉತ್ತಮ ಪೈಪೋಟಿ ನೀಡಿದ ಧ್ರುವ, ಎರಡು ಸುತ್ತುಗಳ ಸ್ಪರ್ಧೆಗಳಲ್ಲಿ ಕ್ರಮವಾಗಿ 236-223 ಹಾಗೂ 257-224 (ಒಟ್ಟು 493-
447) ಅಂತರದ ಅಂಕಗಳನ್ನು ಗಳಿಸಿ ವಿಜಯಿಯಾದರು. ಈ ಪಂದ್ಯಕ್ಕೂ ಮುನ್ನ, ಪುರುಷರ 3ನೇ ಹಾಗೂ 4ನೇ ಸ್ಥಾನಗಳಿಗಾಗಿ ನಡೆದಿದ್ದ ಸ್ಪರ್ಧೆಯಲ್ಲಿ ರಾಜ್ಯದ ಆಕಾಶ್, ಪರ್ವೇಜ್ ಅಹ್ಮದ್ ಅವರನ್ನು 398- 388 ಅಂತರದಲ್ಲಿ ಮಣಿಸಿ, ಗೆಲವು ಸಾಧಿಸಿದರು.
2ನೇ ಶ್ರೇಯಾಂಕಿತೆಗೆ ನಿರಾಸೆ: ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನ ಸ್ಪರ್ಧೆಯಲ್ಲಿ, 2ನೇ ಶ್ರೇಯಾಂಕಿತೆ, ಹರ್ಯಾಣದ ಅನುಕೃತಿ ಬಿಷ್ಣೋಯï ವಿರುದ್ಧ ಸೆಣಸಿದ ಸಬೀನಾ, 223-156 ಅಂಕಗಳ ಅಂತರದಲ್ಲಿ ಅವರನ್ನು ಮಣಿಸಿ, ಚಾಂಪಿಯನ್ ಆದರು. ಮಹಾರಾಷ್ಟ್ರ ದ ಕಶ್ಮೀರಾ ತೃತೀಯ ಸ್ಥಾನ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shabbir DhankotSabeena AthicaDhruv Sardaccident Relief Care 26th National tenpin bowling championshipಶಬ್ಬೀರ್ ಧನ್ಕೋಟ್ದ ಆ್ಯಕ್ಸಿಡೆಂಟ್ ರಿಲೀಫ್ ಕೇರ್ 26ನೇ ರಾಷ್ಟ್ರೀಯ ಟೆನ್‍ಪಿನ್ ಚಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


