ಧೋನಿ ಹೆಸರು ಹೇಳಲು ಮರೆತು ಹೋಯಿತು; ಉದ್ದೇಶಪೂರ್ವಕ ಅಲ್ಲ: ಸೆಹ್ವಾಗ್
ನಾನು ಉದ್ದೇಶ ಪೂರ್ವಕ ಧೋನಿ ಹೆಸರನ್ನು ಬಿಟ್ಟಿಲ್ಲ, ನನಗೆ ಮರೆತು ಹೋಯಿತು ಎಂದು ಸೆಹ್ವಾಗ್ ಹೇಳಿದ್ದಾರೆ...

Published On :
ನವದೆಹಲಿ: ಬಿಸಿಸಿಐ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ವಿರೇಂದ್ರ ಸೆಹ್ವಾಗ್ ಎಲ್ಲರಿಗೂ ಥ್ಯಾಂಕ್ಸ್ ಹೇಳುವಾಗ ಮಹೇಂದ್ರ ಸಿಂಗ್ ಧೋನಿ ಹೆಸರು ಹೇಳಿರಲಿಲ್ಲ. ಸೆಹ್ವಾಗ್ ಧೋನಿ ಹೆಸರು ಹೇಳದೇ ಇರುವುದು ಹಲವಾರು ಊಹಾಪೋಹಗಳನ್ನು ಸೃಷ್ಟಿಸಿ, ಸುದ್ದಿಗೆ ಗ್ರಾಸವಾಗಿತ್ತು.
ಇದೀಗ ಸೆಹ್ವಾಗ್ ಈ ಬಗ್ಗೆ ಸ್ಪಷ್ಟನೆ ನೀಡಿ ಮುಂದೆ ಬಂದಿದ್ದಾರೆ. ನಾನು ಉದ್ದೇಶ ಪೂರ್ವಕ ಧೋನಿ ಹೆಸರನ್ನು ಬಿಟ್ಟಿಲ್ಲ, ನನಗೆ ಮರೆತು ಹೋಯಿತು ಎಂದು ಸೆಹ್ವಾಗ್ ಹೇಳಿದ್ದಾರೆ.
ಬೀಳ್ಕೊಡೆಗೆ ಸಮಾರಂಭದಲ್ಲಿ ನನ್ನ ಪತ್ನಿ ನನ್ನ ಬಳಿಯಲ್ಲಿದ್ದರೂ ಅವಳಿಗೆ ಥ್ಯಾಂಕ್ಸ್ ಹೇಳಲು ನಾನು ಮರೆತಿದ್ದೆ. ನನ್ನ ವೃತ್ತಿ ಜೀವನಕ್ಕೆ ಸದಾ ಸಾಥ್ ನೀಡಿದವಳು ಆಕೆ. ಆಕೆಯ ಹೆಸರನ್ನು ಹೇಳಲು ನಾನು ಮರೆತು ಹೋಗಿದ್ದೆ ಎಂದು ಮಾಧ್ಯಮವೊಂದರಲ್ಲಿ ಮಾತಾಡಿದ ಸೆಹ್ವಾಗ್ ಹೇಳಿದ್ದಾರೆ.
ನಾನು ಧೋನಿಯ ಹೆಸರು ಹೇಳಲಿಲ್ಲ ಎಂದು ಮಾಧ್ಯಮಗಳು ವಿನಾ ಕಾರಣ ವಿವಾದ ಸೃಷ್ಟಿಸುತ್ತಿವೆ. ಇದ್ಯಾವುದೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಕ್ರಿಕೆಟ್‌ಗೆ ವಿದಾಯ ಹೇಳಿದ್ದೇನೆ. ಇಂಥಾ ಸಾಮಾನ್ಯ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಲಾರವು ಎಂದಿದ್ದಾರೆ ಸೆಹ್ವಾಗ್
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಬಿಸಿಸಿಐ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸೆಹ್ವಾಗ್ ತನ್ನ ವೃತ್ತಿ ಜೀವನದಲ್ಲಿ ಸಹಾಯ ಮಾಡಿದ ಮಾಜಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಓಪನರ್ ಗೆಳೆಯ ಸಚಿನ್ ತೆಂಡೂಲ್ಕರ್ ಮೊದಲಾದವರ ಹೆಸರು ಹೇಳಿ ಧನ್ಯವಾದ ಹೇಳಿದ್ದರೂ, 6 ವರ್ಷಗಳ ಕಾಲ ನಾಯಕನಾಗಿದ್ದ ಧೋನಿಯ ಹೆಸರು ಹೇಳಲು ಮರೆತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


